ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಊಹಾಪೋಹ ಹೇಳಿಕೆಗೆ ಪ್ರಾಮುಖ್ಯತೆ ಬೇಡ: ಮಹಿಳಾ ಆಯೋಗ ಸದಸ್ಯೆ ಖುಷ್ಬು

udp-27-kushbu
Published on

ಉಡುಪಿ: ಖಾಸಗಿ ನರ್ಸಿಂಗ್​ ಕಾಲೇಜಿನ ವಾಶ್​ ರೂಂನಲ್ಲಿ ನಡೆದ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಲಾಗಿದೆ. ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಪೊಲೀಸರ ಹೇಳಿಕೆ ಹೊರತಾಗಿ ಜನರು ಊಹಾಪೋಹಗಳಿಗೆ ಕಿವಿ ಕೊಡಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​ ತಿಳಿಸಿದರು.

ಗುರುವಾರ ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ಸಾಾಧಾರ ಸಂಗ್ರಹಕ್ಕೆ ಸ್ವಲ್ಪ ಸಮಯ ಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕು. ಯಾವುದೇ ವದಂತಿ ಹಾಗೂ ವಾಟ್ಸಾಪ್​ ಸಂದೇಶಗಳಿಗೆ ಗಮನಕೊಡಬಾರದು.ತನಿಖೆ ಒಂದು ಹಂತಕ್ಕೆ ಬಂದ ಬಳಿಕ ಅಯೋಗದ ವತಿಯಿಂದಲೇ ಮಾಹಿತಿ ನೀಡಲಾಗುವುದು ಎಂದರು.

ಈಗಾಗಲೇ ಟನೆಗೆ ಸಂಬಂಧಪಟ್ಟ ಫೋನ್​ಗಳನ್ನು ವಿಧಿ ವಿಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಆರೋಪಗಳ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಶೌಚಾಲಯದಲ್ಲಿ ಹಿಡನ್​ ಕೆಮರಾ ಇರಿಸಲಾಗಿಲ್ಲ. ಇದೊಂದು ಶೈಣಿಕ ಕೇಂದ್ರವಾಗಿದ್ದು, ಹಿಡನ್​ ಕೆಮರಾ ಇಡಲು ಸಾಧ್ಯವಿಲ್ಲ. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ಅಯೋಗದಿಂದಲೂ ತನಿಖೆ ಮುಂದುವರಿಯಲಿದೆ ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಾಕೆ ಅಕ್ಷಯ್​ ಮಚ್ಚೀಂದ್ರ, ತನಿಖಾಧಿಕಾರಿ ಮಲ್ಪೆ ಠಾಣೆಯ ಇನ್​ಸ್ಪೆಕ್ಟರ್​ ಮಂಜುನಾಥ ಗೌಡ, ಎಸ್​ಐ ಸುಷ್ಮಾ ಭಂಡಾರಿ, ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್​, ಪ್ರಾಂಶುಪಾಲ ರಾಜೀಬ್​ ಮಂಡಲ್​, ಕಾನೂನು ಸಲಹಾ ಸಮಿತಿ ಸದಸ್ಯೆ ಮೇರಿ ಶ್ರೇಷ್ಠ, ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​ ಬೆಳಗ್ಗೆ 10 ಗಂಟೆಗೆ ಕಾಲೇಜಿಗೆ ಆಗಮಿಸಿದ್ದು, ಮಧ್ಯಾಹ್ನ 3.25ರವರೆಗೂ ತನಿಖೆ ಮುಂದುವರಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ, ಸಿಬಂದಿ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಲಿಖಿತ ದೂರು ಕೊಡಲು ನಿರಾಕರಿಸಿದರು ಎನ್ನಲಾಗಿದೆ. ಬಳಿಕ ಟನೆ ನಡೆದ ಶೌಚಾಲಯ, ಕಾಲೇಜಿನ ವಿವಿಧ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net