ವಿಡಿಯೋ ಚಿತ್ರೀಕರಣ ಪ್ರಕರಣ: ಸಿಐಡಿ ತನಿಖೆ ಪ್ರಾರಂಭ

udp-9-cid 1
Published on

ಉಡುಪಿ: ಖಾಸಗಿ ಅರೆವೈದ್ಯಕಿಯ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವ ಹಿನ್ನೆಲೆಯಲ್ಲಿ ಸಿಐಡಿ ಎಸ್​ ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಬುಧವಾರದಿಂದ ತನಿಖೆ ಪ್ರಾರಂಭಿಸಿದೆ.

ಬೆಳಗ್ಗೆ ಘಟನೆ ನಡೆದ ಕಾಲೇಜಿಗೆ ಭೇಟಿ ಕೊಟ್ಟ ಸಿಐಡಿ ತಂಡ ಮಾಹಿತಿಗಳನ್ನು ಕಲೆ ಹಾಕಿ, ಸಂತ್ರಸ್ತೆಯ ಹೇಳಿಕೆಯನ್ನು ಪಡೆದಿದೆ. ಕಾಲೇಜಿನ ಆಡಳಿತ ಮಂಡಳಿ ಸಿಬ್ಬಂದಿಯನ್ನು ವಿಚಾರಣೆ ಮಾಡಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಪ್ರಕರಣ ಬಗ್ಗೆ ವಿಭಿನ್ನ ಆಯಾಮಗಳಲ್ಲಿ ಸಿಐಡಿ ತನಿಖೆ ಮಾಡುತ್ತಿದೆ. ಜುಲೈ 18ರಂದು ನಡೆದ ಘಟನೆಯನ್ನು ಸಿಐಡಿ ಮರು ಸೃಷ್ಟಿ ಮಾಡಿದೆ. ಈ ತನಿಖಾ ಪ್ರಕ್ರಿಯೆಗೆ ಪ್ಲಾಸ್ಟಿಕ್​ ಗೊಂಬೆಗಳನ್ನು ಬಳಕೆ ಮಾಡಿದ್ದಾರೆ. ಗೊಂಬೆ ಬಳಸಿ, ಫೋಟೋ ವೀಡಿಯೋ ಮಾಡಿದ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಮಂಗಳವಾರ ಉಡುಪಿಗೆ ಅಗಮಿಸಿರುವ ಸಿಐಡಿ ಅಧಿಕಾರಿಗಳ ತಂಡ ಸಿಐಡಿ ಡಿವ್ಯೆಎಸ್ಪಿ ಅಂಜುಮಾಲಾ ನಾಯಕ್​ ನೇತೃತ್ವದಲ್ಲಿ ಪೊಲೀಸ್​ ಅಧಿಕಾರಿಗಳಿಂದ ಪ್ರಕರಣ ದಾಖಲೆಗಳನ್ನು ಪಡೆದುಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net