ರೀಲ್ಸ್​​ಗಾಗಿ ಚಲಿಸುವ ರೈಲಿನ ಪಕ್ಕದಲ್ಲಿ ಓಡಿದ ಫಿಟ್‌ನೆಸ್ ಇನ್ಫ್ಲುಯೆನ್ಸರ್​​​​ ವಿಡಿಯೋ ವೈರಲ್​; ನೆಟ್ಟಿಗರ ಆಕ್ರೋಶ | Reels

Reels
Published on

Reels | ಸಾಮಾನ್ಯವಾಗಿ ಸೋಶಿಯಲ್​​ ಮೀಡಿಯಾ ಇನ್ಫ್ಲುಯೆನ್ಸರ್​​​​ಗಳು ಟ್ರೆಂಡಿಂಗ್​​ ರೀಲ್ಸ್​​ ಮಾಡಲು ಬಯಸುತ್ತಾರೆ. ಫೇಮಸ್​​ ಆಗಲು ಹಾಗೂ ಜನರ ಗಮನ ಸೆಳೆಯಲು ಹಲವಾರು ಸಾಹಸಗಳಿಗೆ ಕೈ ಹಾಕುತ್ತಾರೆ. ಆದರೆ ಕೆಲವೊಮ್ಮೆ ಅವರು ಮಾಡುವ ಇಂತಹ ಸಾಹಸಗಳೇ ಅವರ ಜೀವನಕ್ಕೆ ಕಂಟಕವಾಗಬಹುದು. ಇದಕ್ಕೆ ಉದಾಹರಣೆಯಾಗಿ ನೋಡುವುದಾದರೆ ದೆಹಲಿ ಮೂಲದ ಫಿಟ್‌ನೆಸ್ ಇನ್ಫ್ಲುಯೆನ್ಸರ್​​ ಒಬ್ಬರು ವೇಗವಾಗಿ ಚಲಿಸುವ ರೈಲಿನ ಪಕ್ಕದಲ್ಲಿ ಓಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಆ ಪೋಸ್ಟ್​​ಗೆ ನೆಟ್ಟಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಪಿಕು ಸಿಂಗ್ ರೈಲ್ವೆ ಹಳಿಯ ಮೇಲೆ ಓಡುತ್ತಿರುವುದನ್ನು ಕಾಣಬಹುದು. ರೈಲು ಅವರ ಹಿಂದೆಯೇ ವೇಗದಲ್ಲಿ ಬರುತ್ತಿದೆ. ವಿಶೇಷವಾಗಿ ರೈಲಿನ ಜೊತೆ ಓಡುವ ವಿಡಿಯೋಗಳನ್ನು ಮಾಡಿ ಖ್ಯಾತಿಯನ್ನು ಪಡೆದರು ಕೂಡ ಅವರ ಧೈರ್ಯಶಾಲಿ ಸಾಹಸವು ಟೀಕೆಗೆ ಗುರಿಯಾಗಿದೆ. ಆ ವಿಡಿಯೋಗೆ ಪಿಕು ಸಿಂಗ್ "ರೈಲಿನ ಜೊತೆ ಓಡುತ್ತಿದ್ದೇನೆ" ಎಂದು ಸರಳವಾಗಿ ಕ್ಯಾಪ್ಶನ್​ ನೀಡಿದ್ದಾರೆ.

ಆದರೆ ಈ ವಿಡಿಯೋ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಆಕೆಯ ಫಿಟ್ನೆಸ್ ಅನ್ನು ಮೆಚ್ಚಿಕೊಂಡರೆ, ಇನ್ನು ಹಲವರು ಈ ಸಾಹಸವನ್ನು ಖಂಡಿಸಿ, ಅದರ ಅಪಾಯಗಳನ್ನು ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ನೆಟ್ಟಿಗರು ಈ ವಿಡಿಯೋ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಇಂತಹ ಅಜಾಗರೂಕ ವರ್ತನೆಯ ಪರಿಣಾಮಗಳನ್ನು ಎತ್ತಿ ತೋರಿಸಿದ್ದಾರೆ.

ಒಬ್ಬ ಬಳಕೆದಾರ, "ಆ ಹುಡುಗಿ ಸಾಯುತ್ತಾಳೆ... ಕೇವಲ ವೀಕ್ಷಣೆಗಾಗಿ ಇದನ್ನು ಮಾಡಬೇಡಿ. ನೀವು ಸಾಗುತ್ತಿರುವ ಹಾದಿಯಲ್ಲೇ ಒಂದು ದಿನ ನೀವು ಸಿಲುಕಿಕೊಂಡು ಸಾಯುತ್ತೀರಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, "ಅವಳು ಒಂದು ತಪ್ಪು ಹೆಜ್ಜೆ ಇಟ್ಟರೆ ಸಾಕು, ಅವಳ ಕತೆ ಮುಗಿದೇ ಹೋಯಿತು " ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು, "ನಾನಿನ್ನು ಯೋಚಿಸುತ್ತಿದ್ದೇನೆ, ರೈಲಿನೊಂದಿಗೆ ಓಡುವುದರ ಅರ್ಥವೇನು?" ಎಂದು ಕೇಳಿದ್ದಾನೆ. "ವಿಡಿಯೋಗಾಗಿ ನಿಮ್ಮ ಪ್ರಾಣವನ್ನೇ ಪಣಕ್ಕಿಡಬೇಡಿ, ಜೀವನ ಅಮೂಲ್ಯ, ಮೈದಾನದಲ್ಲಿ ಮಾತ್ರ ಓಡಿ." ಎಂದು ಹೇಳಿದನು ಬುದ್ಧಿಮಾತನ್ನು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 18,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಫಿಟ್‌ನೆಸ್ ಇನ್ಫ್ಲುಯೆನ್ಸರ್​​​​​ ಪಿಕು ಸಿಂಗ್​​ಗೆ ಟೀಕೆಗಳ ಹೊರತಾಗಿಯೂ ಕೆಲವು ಫಾಲೋವರ್ಸ್ ಈಕೆಯ ಬೆಂಬಲಕ್ಕೆ ನಿಂತು, ಅವರ ಫಿಟ್ನೆಸ್ ಮತ್ತು ರೀಲ್ಸ್​​ನ ಸಿನಿಮೀಯ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net