ಚಂದನ ವಾಹಿನಿಯಲ್ಲಿ ವಿದ್ಯಾರ್ಥಿಗಳಿಗೆ ವಿಡಿಯೋ ಪಾಠ

JLY., 18, HNP., PH.1.
Published on

ಹೊಳೆನರಸೀಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗದಂತೆ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಬಿಇಒ ಜಿ.ಎ. ಲೋಕೇಶ್ ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಇ ಕ್ಲಾಸ್ ಕಲಿಕಾ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ ಮಾತನಾಡಿದರು. 2020/21 ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ವಿಡಿಯೋ ಪಾಠಗಳನ್ನು ಜುಲೈ 20ರಿಂದ ಬೆಳಗ್ಗೆ 9.30ರಿಂದ ಪ್ರಸಾರ ಮಾಡಲಾಗುತ್ತದೆ. ಪ್ರತಿ ಪಾಠ 30 ನಿಮಿಷಗಳಾಗಿದ್ದು, ಪ್ರತಿ ದಿನ 8 ಅವಧಿಗಳನ್ನು ಪ್ರಸಾರ ಮಾಡಲಾಗುತ್ತದೆ. ಪ್ರತಿ ಪಾಠದಲ್ಲಿ ಚಟುವಟಿಕೆಗಳನ್ನು ಅಳವಡಿಸಿದ್ದು, ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತ ಅಗತ್ಯ ಸೂಚನೆಗಳನ್ನು ಅಳವಡಿಸಲಾಗಿದೆ ಹಾಗೂ ಡಿಎಸ್‌ಇಆರ್‌ಟಿ ಯ ಜ್ಞಾನದೀಪ ಯೂಟ್ಯೂಬ್ ಚಾನಲ್‌ಗಳಲ್ಲಿ ಮತ್ತು ದೀಕ್ಷಾ ಪೊರ್ಟ್‌ಲ್‌ಗಳಲ್ಲಿ ಅಳವಡಿಸಲಾಗಿದೆ.

ಪ್ರಸಾರದ ಅವಧಿ ಬೆಳಗ್ಗೆ 9.30ರಿಂದ 11 ಗಂಟೆ ಮತ್ತು 11.30ರಿಂದ 12 ಗಂಟೆ. ಮಧ್ಯಾಹ್ನ 3ರಿಂದ 4.30 ಗಂಟೆ ಮತ್ತು 5ರಿಂದ 5.30 ಗಂಟೆ ತನಕ ತರಗತಿಗಳು ನಡೆಯಲಿವೆ. ಶಿಕ್ಷಕರು ವೀಕ್ಷಿಸಿ, ತಮ್ಮ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಹನ ಸಾಧಿಸಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕ್ರಮ ವಹಿಸಲು ಸೂಚಿಸಿದೆ ಎಂದರು.

ಇಂದಿನ ಕರೊನಾ ವೈರಸ್‌ನಿಂದಾಗಿ ಶಾಲಾ ತರಗತಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೈಗೊಂಡಿರುವ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ ಅಗತ್ಯವಾಗಿತ್ತು. ಗ್ರಾಮೀಣ ಭಾಗದ ಪಾಲಕರಿಗೆ ತರಗತಿಗಳ ಮಹತ್ವ ಮತ್ತು ಮಾಹಿತಿಯನ್ನು ಅಗತ್ಯವಾಗಿ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಸಾರ್ವಜನಿಕರು ಮುಂದಾಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net