VIDEO: ಬಸಣ್ಣಿ... ಹಾಡಿಗೆ ಕಿಮ್ಸ್ ಆಸ್ಪತ್ರೆಯ ಆಯಾ- ಸೂಪರ್​ವೈಸರ್ ಟಪ್ಪಾಂಗುಚ್ಚಿ!

Hubballi Kims Superwiser Dace 16 MAR 20
Published on

ಹುಬ್ಬಳ್ಳಿ: ಕರೊನಾ ವೈರಸ್ Covid19 ಸೋಂಕಿನ ಬಗ್ಗೆ ಎಲ್ಲೆಡೆ ಜಾಗೃತಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಆರೋಗ್ಯ ಸೇವಾ ಸಿಬ್ಬಂದಿಗಳ ರಜೆಯನ್ನೂ ರದ್ದುಗೊಳಿಸಿ ಕರ್ತವ್ಯ ನೆರವೇರಿಸುವಂತೆ ಸೂಚಿಸಿದೆ. ಪರಿಸ್ಥಿತಿಯ ಗಂಭೀರತೆಯ ಅರಿವು ಎಲ್ಲರಲ್ಲೂ ಮೂಡಿಲ್ಲ ಎಂಬುದು ಸ್ಪಷ್ಟ. ಇವುಗಳ ನಡುವೆಯೇ  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆಯಾ-ಸೂಪರ್​ವೈಸರ್​ಗಳ ಟಪ್ಪಾಂಗುಚ್ಚಿ ವಿಡಿಯೋ ಎಲ್ಲರ ಗಮನಸೆಳೆದಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕರೋನಾ ಸೋಂಕು ಪೀಡಿತರ ಚಿಕಿತ್ಸೆಗಾಗಿ ಐಸೋಲೇಷನ್ ವಾರ್ಡ್ ಆರಂಭಿಸಲಾಗಿದೆ. ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮತ್ತು ಸ್ವಚ್ಛತೆ ಮೂಡಿಸುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಆದರೆ, ಆಯಾಗಳು ಮತ್ತು ಸೂಪರ್​ವೈಸರ್​ಗಳಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾದಂತೆ ಇಲ್ಲ ಎನ್ನುವ ಮಾತು ಕೇಳಿಬಂದಿದೆ.

ಆಸ್ಪತ್ರೆಯ ಹೆರಿಗೆ ವಾರ್ಡ್​ ಪಕ್ಕದಲ್ಲೇ ಆಯಾ ಮತ್ತು ಸೂಪರ್​ವೈಸರ್​ ಬಸಣ್ಣಿ ಬಾ ಬಾ ಹಾಡಿಗೆ ಟಪ್ಪಾಂಗುಚ್ಚಿ ಸ್ಟೆಪ್​ ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಸದಾ ನಿಶಬ್ದವನ್ನು ಬೇಡುತ್ತಾರೆ. ಆದರೆ ಆಯಾ ಮತ್ತು ಸೂಪರ್​ವೈಸರ್​ಗಳ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net