VIDEO: ನಟೋರಿಯಸ್ ಕ್ರಿಮಿನಲ್​ ಜೈದ್‌ ಖಾಕಿ ಬಲೆಗೆ

913444
Published on

ಬೆಂಗಳೂರು: ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿ ಭಾಗಿಯಾಗಿದ್ದ ಇನ್ನೋರ್ವ ನಟೋರಿಯಸ್ ಕ್ರಿಮಿನಲ್​ ಜೈದ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಈತ ಗಲಭೆ ಸಂದರ್ಭದಲ್ಲಿ ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಆರೋಪಿಯ ಅಕ್ಕನ ಗಂಡ ಅಫ್ರಿದಿ ಎಂಬಾತ ನೀಡಿದ ಮಾಹಿತಿ ಆಧರಿಸಿ ಜೈದ್​ನನ್ನು ಪೊಲೀಸರು ಬಂಧಿಸಿದ್ದಾರೆ. ಅಫ್ರಿದಿಯನ್ನು ಪೊಲೀಸರು ಬೆಂಗಳೂರು ಚರ್ಚ್​ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಕೇಸ್​ನಲ್ಲಿ ಬಂಧಿಸಿದ್ದರು.

ಗಲಭೆ ಪ್ರಕರಣಕ್ಕೆ ಟೆರರ್ ಲಿಂಕ್ ಇರುವ ಕಾರಣ ಸಿಸಿಬಿ ಪೊಲೀಸರು ತೀವ್ರ ನಿಗಾದೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಸಿಸಿಬಿಯ ಒಸಿಡಬ್ಲ್ಯು ವಿಭಾಗದ ತಂಡ ಜೈದ್​ನನ್ನು ಬಂಧಿಸಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net