ಪೊಲೀಸ್ ಹೆಸರಲ್ಲಿ ವಿಡಿಯೋ ಕರೆ ಮಾಡಿ ವಂಚನೆ

Fraud
Published on

ಶಿರ್ವ: ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವಾಟ್ಸಾಪ್ ವಿಡಿಯೋ ಕರೆ ಮಾಡಿ ಶಿರ್ವ ಗ್ರಾಮದ ನಿವಾಸಿ ಲಿನೆಟ್ ಮೆಂಡೋನ್ಸ (52) ಎಂಬುವರಿಂದ ಹಣ ವರ್ಗಾಯಿಸಿಕೊಂಡಿರುವ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಿನೆಟ್ ಮೆಂಡೋನ್ಸ ಅವರಿಗೆ ಸೆ.18ರಂದು ವಾಟ್ಸಾಪ್ ಕರೆ ಮಾಡಿದ ವ್ಯಕ್ತಿ ಪೊಲೀಸ್ ಸಮವಸ್ತ್ರ ಹಾಕಿಕೊಂಡಿದ್ದ, ಆತ ನಿಮ್ಮ ಮೇಲೆ ಕೇಸಿದೆ. ನೀವು ಗೂಂಡಾಗಿರಿ ಮಾಡಿದ ಹಣ ಬ್ಯಾಂಕ್ ಖಾತೆಯಲ್ಲಿದೆ. ನಿಮ್ಮ ಹಣ ಉಳಿಯಬೇಕಾದರೆ ಕೂಡಲೇ ನಾನು ತಿಳಿಸಿದ ಖಾತೆಗೆ ಹಣ ಹಾಕಬೇಕೆಂದು ಹೇಳಿದ್ದ. ವಂಚಕನನ್ನು ಪೊಲೀಸ್ ಎಂದೇ ನಂಬಿದ ಲಿನೆಟ್ ಮೆಂಡೋನ್ಸ, ಆತ ಹೇಳಿದ ಖಾತೆಗೆ 4,10,000 ರೂ. ಆರ್‌ಟಿಜಿಎಸ್ ವಾಡಿದ್ದಾರೆ. ಬಳಿಕ ವಂಚನೆಗೆ ಒಳಗಾಗಿರುವುದು ಅರಿವಾಗಿ ಶಿರ್ವ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net