ಧಾರವಾಡ ಐಐಟಿ ಕ್ಯಾಂಪಸ್ ಮೆಚ್ಚಿದ ಉಪ ರಾಷ್ಟçಪತಿ

Published on

ಧಾರವಾಡ: ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ) ಕ್ಯಾಂಪಸ್ ನಾವಿನ್ಯತೆ ಮತ್ತು ಸುಸ್ಥಿರತೆಯನ್ನು ಅಳವಡಿಸಿಕೊಂಡಿದೆ ಎಂದು ಉಪ ರಾಷ್ಟçಪತಿ ಜಗದೀಪ ಧನಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಐಐಟಿಯಲ್ಲಿ ನಿರ್ಮಿಸಿದ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಹಾಗೂ ಸೆಂಟ್ರಲ್ ಲರ್ನಿಂಗ್ ಥಿಯೇಟರ್ ಮತ್ತು ಶಾಶ್ವತ ಕಟ್ಟಡದಲ್ಲಿನ ೨ ನೂತನ ಪ್ರವೇಶ ದ್ವಾರಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.
ಸುಮಾರು ೪೭೦ ಎಕರೆಗಳಲ್ಲಿ ಸ್ಥಾಪನೆಗೊಂಡಿರುವ ಐಐಟಿ ಶಾಶ್ವತ ಕ್ಯಾಂಪಸ್‌ನ ಮಾದರಿಯನ್ನು ವೀಕ್ಷಿಸಿ `ಸುಸ್ಥಿರ ಹಸಿರು ಕ್ಯಾಂಪಸ್' ಇದಾಗಿದೆ ಎಂದು ಮೆಚ್ಚಿದರು. ಐಐಟಿ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದ ಅವರು, ದೇಶದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ವಾತಾವರಣವಿದ್ದು, ಐಐಟಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net