ರಾಣಿ ಚನ್ನಮ್ಮ ವಿಜಯೋತ್ಸವ

h24-Ranichennamma
Published on

ಹುಬ್ಬಳ್ಳಿ: ಬಸವ ಪರಿಸರ ಸಂರಕ್ಷಣಾ ಸಮಿತಿ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಹೊರಕೇರಿ ಮಾಸ್ತರ ಪ್ರತಿಷ್ಠಾನ ವತಿಯಿಂದ ವೀರರಾಣಿ ಕಿತ್ತೂರ ಚನ್ನಮ್ಮನ 200ನೇ ವಿಜಯೋತ್ಸವ ನಿಮಿತ್ತ ನಗರದ ರಾಣಿ ಚನ್ನಮ್ಮ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಲಾಯಿತು. ನಂತರ ಪರಿಸರ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಮೇಯರ್ ವೀಣಾ ಚೇತನ ಭಾರದ್ವಾಡ್, ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರೆಡ್ಡಿ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಕಲಗೌಡ ಪಾಟೀಲ, ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ, ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಮೀನಾಕ್ಷಿ ವಂಟಮುರಿ, ಪ್ರಮುಖರಾದ ಡಾ. ಸುರೇಶ ಹೊರಕೇರಿ, ಭಾರತಿ ವಾಲಿ, ಮೃತ್ಯುಂಜಯ ಮಟ್ಟಿ, ಅನೀಲ ಬುನಿಯನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net