ಬಿ.ಎಸ್.ಮಹೇಶ ಬೆಂಬಲಿತರ ಗೆಲುವು

Oplus_16908288
ನಂಜನಗೂಡು ತಾಲೂಕಿನ ಬಿಳಿಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸಂಭ್ರಮಿಸಿದರು.
Published on

ನಂಜನಗೂಡು: ತಾಲೂಕಿನ ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ 10 ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಎಸ್ ಮಹೇಶ ಬೆಂಬಲಿತ 10 ಅಭ್ಯರ್ಥಿಗಳು ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.

ಬಿಸಿಎಂ ಎ ನಿಂದ ಮಹದೇವು, ಬಿಸಿಎಂ ಬಿ ನಿಂದ ಕೆಂಪರಾಜಪ್ಪ ಸೇರಿ ಎರಡು ನಿರ್ದೇಶಕರ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. ಇನ್ನುಳಿದ 10 ನಿರ್ದೇಶಕರ ಸ್ಥಾನಗಳಿಗೆ ಸಂಘದ ಆವರಣದಲ್ಲಿ ಬೆಳಗ್ಗೆ 9 ರಿಂದ 4 ಗಂಟೆ ತನಕ ಚುನಾವಣೆ ನಡೆದು ನಂತರ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಸಾಮಾನ್ಯ ಕ್ಷೇತ್ರದಿಂದ ಸೋಮಣ್ಣ, ಕಲ್ಕುಂದ ಪಿ.ಮಹದೇವಸ್ವಾಮಿ, ಕೆ.ಬಿ.ಗುರುಮಲ್ಲೇಗೌಡ, ಕೆ.ಬಿ.ಚಂದ್ರಶೇಖರ, ಕೆ.ಎಂ.ಶೇಖರಪ್ಪ, ಮಹಿಳಾ ಮೀಸಲಾತಿಯಿಂದ ಪಚ್ಚೆತಾಯಮ್ಮ, ನಾಗರತ್ನಮ್ಮ, ಪರಿಶಿಷ್ಟ ಜಾತಿಯಿಂದ ಪುಟ್ಟಬುದ್ಧಿ, ಪರಿಶಿಷ್ಟ ಪಂಗಡದಿಂದ ಸೋಮಣ್ಣ, ಸಾಲಗಾರರಲ್ಲದ ಕ್ಷೇತ್ರದಿಂದ ಚಿಕ್ಕೇಗೌಡ ಜಯಭೇರಿ ಬಾರಿಸಿದರು.

ಚುನಾವಣಾಧಿಕಾರಿ ರಮೇಶ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಎಚ್.ಸಿ.ಮಹದೇವಸ್ವಾಮಿ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸಿದ್ದಾರೆ. ಫಲಿತಾಂಶ ಪ್ರಕಟಿತವಾಗುತ್ತಿದ್ದಂತೆ ಸಂಘದ ವ್ಯಾಪ್ತಿಯ ಕಲ್ಕುಂದ, ಭೋಗಯ್ಯನಹುಂಡಿ, ಕಾಹಳ್ಳಿ, ಬಿಳಿಗೆರೆ, ಬೆಳಗುಂದ, ಕುಪ್ಪರವಳ್ಳಿ ಗ್ರಾಮಗಳ ಮುಖಂಡರು ಅಭ್ಯರ್ಥಿಗಳ ಬೆಂಬಲಿಗರು, ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net