ಮತದಾರರ ಮನವೊಲಿಕೆಯಿಂದ ಮಾತ್ರ ಜಯ ಸಾಧ್ಯ

20-SVR-1
Published on

ಸವಣೂರ: ಕಾಂಗ್ರೆಸ್ ಪಕ್ಷ ಕ್ಷೇತ್ರದ ಅಭ್ಯರ್ಥಿಯ ಘೊಷಣೆ ಮಾಡಿಲ್ಲ. ಕ್ಷೇತ್ರದ ಜನರು ಬಯಸಿದ ಅಭ್ಯರ್ಥಿಯೇ ಚುನಾವಣೆ ಎದುರಿಸಲಿದ್ದು ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಕ್ಷೇತ್ರದ ಜನತೆ ಕೊಡುಗೆ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ತಿಳಿಸಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಪುರಸಭೆ, ಜಿಪಂ, ಗ್ರಾಪಂ ಕೋ ಆರ್ಡಿನೆಟರ್ಸ್ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ಬೂತ್ ಮಟ್ಟದಲ್ಲಿ ಮನೆಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸಿದಾಗ ಮಾತ್ರ ಜಯಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಮುಂದಿನ 4 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಲಿದೆ. ಕ್ಷೇತ್ರದ ಅಭಿವೃದ್ಧಿಗೆ ಜನಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದ ಶಾಸಕನನ್ನು ಆಯ್ಕೆ ಮಾಡಬೇಕು. ಇದರಿಂದ, ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಲಿದೆ ಎಂದರು.
ಬಸವರಾಜ ಬೊಮ್ಮಾಯಿಯವರು ಕೇಂದ್ರದಲ್ಲಿ ಮಂತ್ರಿ ಆಗಬಹುದು ಎನ್ನುವ ಆಸೆಯಿಂದ ಕ್ಷೇತ್ರದ ಜನತೆಯ ಆಶೀರ್ವಾದ ಧಿಕ್ಕರಿಸಿ ಮೋಸ ಮಾಡಿ ಸಂಸದರಾಗಿದ್ದಾರೆ. ಅಂತಹವರಿಗೆ ಮತ ನೀಡದೆ ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದರು.
ಕಾಂಗ್ರೆಸ್ ಪ್ರಮುಖ ಆನಂದಸ್ವಾಮಿ ಗಡ್ಡದದೇವರಮಠ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ರಘುನಂದನ್, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಶಿಗ್ಗಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಪಾಟೀಲ, ಪುರಸಭೆ ಅಧ್ಯಕ್ಷ ಅಲ್ಲಾವುದ್ಧಿನ್ ಮನಿಯಾರ, ಫಜ್ಜಲಹ್ಮದಖಾನ್ ಪಠಾಣ, ಫೀರ್​ಅಹ್ಮದ್ ಗವಾರಿ, ಉಮೇಶ ಕಲ್ಮಠ, ಅಶೋಕ ಮನ್ನಂಗಿ, ಸುಭಾಸ ಮಜ್ಜಗಿ, ರವಿ ಕರಿಗಾರ, ಎಂ.ಎಂ. ಪಠಾಣ, ಶಂಭು ಆಜೂರ, ಕುಮಾರಸ್ವಾಮಿ ಅಡವಿಸ್ವಾಮಿಮಠ, ಗುಡ್ಡಪ್ಪ ಜರದಿ, ಲಕ್ಷ್ಮಣ ಕನವಳ್ಳಿ, ಸಾಧಿಕ ಮನಿಯಾರ, ಇತರರಿದ್ದರು. ನವೀನ ಬಂಡಿವಡ್ಡರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net