

ಚಿಮ್ಮಡ: ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಜೀವನದ ಪ್ರತಿ ಹಂತದಲ್ಲಿಯೂ ಗೆಲ್ಲಲು ಸಾಧ್ಯ ಎಂದು ಸರ್ಕಾರಿ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸವಿತಾ ರಾಠೋಡ ಹೇಳಿದರು.
ಸರ್ಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಸತತವಾಗಿ ಅಧ್ಯಯನ ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಧನೆ ಮಾಡಬಹುದು. ಉತ್ತಮ ಮನೋಭಾವ, ಒಳ್ಳೆಯ ನಡವಳಿಕೆಯಿಂದ ತಂದೆ ತಾಯಿಯರಿಗೆ ವಿಧೇಯತೆ ತೋರಿದರೆ ಒಳ್ಳೆಯ ಫಲ ದೊರೆಯುತ್ತದೆ ಎಂದರು.
ಹಿಂದಿನ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಮಾತನಾಡಿ, ಗ್ರಾಮಸ್ಥರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸಹಕಾರದಿಂದ ಹಲವಾರು ಕೊರತೆಗಳ ನಡುವೆಯೂ ವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ಶೇ.100ರಷ್ಟು ಲಿತಾಂಶ ಗಳಿಸಿದ್ದು ಹೆಮ್ಮೆಯ ವಿಷಯ ಎಂದರು.
ವಿದ್ಯಾಲಯದ ಅಭಿವೃದ್ಧಿ ಸಮಿತಿಯ ಪ್ರಭು ಪಾಲಭಾವಿ, ಉಪನ್ಯಾಸಕ ಬಿ.ಬಿ. ಕುದರಿಮನಿ ಮಾತನಾಡಿದರು.
ಬಸವರಾಜ ಕುಂಚನೂರ, ಅವ್ವನಪ್ಪಾ ಮುಗಳಖೋಡ, ಗ್ರಾಪಂ ಮಾಜಿ ಅಧ್ಯಕ್ಷ ಪರಪ್ಪಾ ನೇಸೂರ, ಬೀರಪ್ಪಾ ಹಳೆಮನಿ, ರಾಚಯ್ಯ ಮಠಪತಿ, ಶಂಕರ ಬ. ಪಾಟೀಲ, ಕಾಳಪ್ಪ ಬಡಿಗೇರ, ಹುಸೇನ ಗೊಳಸಂಗಿ, ಶಂಕರ ಬಿಳ್ಳೂರ, ಮಂಜು ಸಿಡ್ಲೆವಗೋಳ ಮತ್ತಿತರರಿದ್ದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಎಸ್. ಜಿಟ್ಟಿ, ವಿದ್ಯಾಲಯದ ಹಿಂದಿನ ಪ್ರಾಚಾರ್ಯ ಶರತ್ಚಂದ್ರ ಜಂಬಗಿ, ಸಾಧನೆಗೈದ ವಿದ್ಯಾರ್ಥಿನಿಯರನ್ನು ನಗದು ಪುರಸ್ಕಾರದೊಂದಿಗೆ ಸತ್ಕರಿಸಿ ಗೌರವಿಸಲಾಯಿತು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕ ಡಾ.ಎಚ್.ಎಂ. ಕುಂಬಾರ ಸ್ವಾಗತಿಸಿದರು. ಪ್ರವೀಣ ಮೈತ್ರಿ ನಿರೂಪಿಸಿದರು. ಪಿ.ಪಿ.ವಸದ ವಂದಿಸಿದರು.