ಲೋಕಸಭೆ ಚುನಾವಣೆಯಲ್ಲೂ ಗೆಲುವು

7 smg 9
ಭಾರತ್ ಜೋಡೋ ಯಾತ್ರೆ ಸಂಭ್ರಮಾಚರಣೆಯಲ್ಲಿ ಕಿಮ್ಮನೆ ರತ್ನಾಕರ್ ಮಾತನಾಡಿದರು. ಎಚ್.ಎಸ್.ಸುಂದರೇಶ್, ಆರ್.ಪ್ರಸನ್ನಕುಮಾರ್, ಆರ್.ಎಂ.ಮಂಜುನಾಥ್‌ಗೌಡ, ಎನ್.ರಮೇಶ್, ಜಿ.ಪಲ್ಲವಿ, ಬಲ್ಕಿಷ್ ಭಾನು, ಕಲಗೋಡು ರತ್ನಾಕರ್ ಇದ್ದರು.
Published on

ಶಿವಮೊಗ್ಗ: ಭಾರತ್ ಜೋಡೋ ಐತಿಹಾಸಿಕ ಪಾದಯಾತ್ರೆಗೆ ಮೊದಲನೇ ವರ್ಷದ ವಾರ್ಷಿಕ ಸಂಭ್ರಮಾಚರಣೆಯನ್ನು ಗುರುವಾರ ಸಂಜೆ ಜಿಲ್ಲಾದ್ಯಂತ ಕಾಂಗ್ರೆಸ್‌ನಿಂದ ಆಯೋಜಿಸಲಾಗಿತ್ತು. ನಗರದ ಶಿವಪ್ಪನಾಯಕ ವೃತ್ತದಿಂದ ಸೀನಪ್ಪ ಶೆಟ್ಟಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಭಾರತ್ ಜೋಡೋ, ಸಂಭ್ರಮದ ಹಾಡುಗಳು ಮತ್ತು ದಾರಿ ಉದ್ದಕ್ಕೂ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಭಾರತ್ ಜೋಡೋ ಯಾತ್ರೆ ಆರಂಭವಾದಾಗ ಬಿಜೆಪಿ ಅಪಹಾಸ್ಯ ಮಾಡಿತ್ತು. ಆದರೆ 12 ಸಾವಿರ ಕಿಮೀ ದೂರವನ್ನು ರಾಹುಲ್ ಗಾಂಧಿ ಕ್ರಮಿಸಿ ಯಶಸ್ವಿಯಾಗಿದ್ದರು. ಬಿಜೆಪಿಯ ಸುಳ್ಳು ಭರವಸೆಯ ಬಗ್ಗೆ ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಜನರಲ್ಲಿ ಜಾಗೃತಿಗೊಳಿಸಿದರು ಎಂದರು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಜಾರಿಗೊಳಿಸಿದೆ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯನ್ನು ಗೆದ್ದು ಬೀಗಲಿದ್ದೇವೆ. 2024ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು. ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕ ಆರ್.ಎಂ.ಮಂಜುನಾಥ್ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಪ್ರಮುಖರಾದ ಜಿ.ಪಲ್ಲವಿ, ಬಲ್ಕಿಷ್ ಭಾನು, ಕಲಗೋಡು ರತ್ನಾಕರ್, ಎಸ್.ಪಿ.ಶೇಷಾದ್ರಿ, ವಿಶ್ವನಾಥ ಕಾಶಿ, ವಿಜಯಲಕ್ಷ್ಮೀ, ಸ್ಟೆಲ್ಲಾ ಮಾರ್ಟಿನ್, ಸುವರ್ಣಾ ನಾಗರಾಜ್, ಸೌಗಂಧಿಕಾ ರಘುನಾಥ್, ರೇಷ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net