

ಮುಂಡರಗಿ: ಪಟ್ಟಣದ ಜೆ.ಎ. ಪ್ರೌಢಶಾಲೆ ಮೈದಾನದಲ್ಲಿ ಇತ್ತೀಚೆಗೆ ಜರುಗಿದ ಪಶ್ಚಿಮ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.
ಬಾಲಕಿಯರ ವಾಲಿಬಾಲ್, ಥ್ರೋ ಬಾಲ್‌ನಲ್ಲಿ ಪ್ರಥಮ, ಬಾಲಕರು ವಾಲಿಬಾಲ್ ಹಾಗೂ ಥ್ರೋ ಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ಆಟಗಳಲ್ಲಿ ಸಾನ್ವಿ ಸೂಡಿ 100 ಮೀ ಮತ್ತು 400 ಮೀಟರ್ ಓಟದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪಡೆದಿದ್ದಾಳೆ. 600 ಮೀಟರ್ ಓಟದಲ್ಲಿ ಈಶ್ವರಿ ಪಾಟೀಲ ದ್ವಿತೀಯ, ಭೂಮಿಕಾ ಹಂಚಿನಾಳ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಚಕ್ರ ಎಸೆತದಲ್ಲಿ ಶಿವಪ್ರಸಾದ ಮಡಿವಾಳವಾರ ದ್ವಿತೀಯ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಸಮರ್ಥ ಹಿರೇಮಠ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವದಿಸಿದ್ದಾರೆ. ಶಾಲಾ ಸ್ಥಾನಿಕ ಕಮಿಟಿ, ಜ.ಅ.ವಿದ್ಯಾ ಸಮಿತಿಯವರು, ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.