ಬಿಜೆಪಿ ಮಹಿಳಾ ಮೋರ್ಚಾದಿಂದ ವಿಜಯೋತ್ಸವ

21KMT1_BJP
Published on

ಕುಮಟಾ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಐತಿಹಾಸಿಕ ಮಹಿಳಾ ಮಸೂದೆ ಅಂಗೀಕರಿಸಿದ ಹಿನ್ನೆಲೆಯಲ್ಲಿ ಕುಮಟಾ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಗುರುವಾರ ಪಟ್ಟಣದ ಗಿಬ್ ಸರ್ಕಲ್​ನಲ್ಲಿ ಜಯಘೊಷದೊಂದಿಗೆ ಸಂಭ್ರಮ ಆಚರಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗಣೇಶ ಚತುರ್ಥಿ ಶುಭ ಸಂದರ್ಭದಲ್ಲಿ ನೂತನ ಸಂಸತ್ ಭವನದಲ್ಲಿ, ಮಹಿಳಾ ಮೀಸಲು ವಿಧೇಯಕ ಮಂಡಿಸಿ ಸದನದ ಅನುಮೋದನೆ ಪಡೆಯುವ ಮೂಲಕ ಮಹಿಳೆಯರ ಸಬಲೀಕರಣದ ಬಗೆಗಿನ ವಿಶೇಷ ಕಾಳಜಿಯನ್ನು ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಮಹಿಳಾ ಮೋರ್ಚಾ ಅಧ್ಯಕ್ಷೆ ಮೋಹಿನಿ ಗೌಡ, ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಎಂ.ಜಿ. ಭಟ್ಟ, ಜಿಲ್ಲಾ ಪ್ರಮುಖರಾದ ಸುಬ್ರಾಯ ವಾಳ್ಕೆ, ಕುಮಾರ ಮಾರ್ಕಾಂಡೆ, ಡಾ. ಜಿ.ಜಿ. ಹೆಗಡೆ, ಗಜಾನನ ಗುನಗಾ, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಜಯಾ ಶೇಟ್, ಅನುರಾಧಾ ಭಟ್, ಶೈಲಾ ಗೌಡ, ಮಾದೇವಿ ಮುಕ್ರಿ, ಗೀತಾ ಮುಕ್ರಿ, ಗೌರಿ ವೈದ್ಯ, ಮಂಜುಳಾ ಮುಕ್ರಿ, ಸೀಮಾ ಕಿಣಿ, ವಿವಿಧ ಪದಾಧಿಕಾರಿಗಳು, ಪುರಸಭೆ ಹಾಗೂ ಗ್ರಾಮಪಂಚಾಯಿತಿ ಸದಸ್ಯರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net