ವಿಠ್ಠಲ ಲದವಾ ತಂಡಕ್ಕೆ ಜಯ

ssk
Published on

ಹುಬ್ಬಳ್ಳಿ: ದಿ ಎಸ್‌ಎಸ್‌ಕೆ ಕೋ-ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು, ಎಸ್‌ಎಸ್‌ಕೆ ಸಮಾಜದ ಪುನಶ್ಚೇತನ ಮಂಡಳಿ ಬೆಂಬಲಿತ ವಿಠ್ಠಲ ಲದವಾ ನೇತೃತ್ವದ ತಂಡ ಜಯ ಸಾಧಿಸಿದೆ.

ಮಹಿಳಾ ಸ್ಥಾನಕ್ಕೆ ಸರಳಾ ಭಾಂಡಗೆ, ಸೀಮಾ ಲದವಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದುಳಿದ ಅ ವರ್ಗದಿಂದ ಸ್ಪರ್ಧಿಸಿದ್ದ ನಾರಾಯಣ ಜರತಾರಘರ 805, ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಠ್ಠಲ ಲದವಾ 839, ಅರುಣ ಇರಕಲ್ಲ 777, ದೀಪಕ ಮಗಜಿಕೊಂಡಿ 775, ನಾರಾಯಣ ಬದ್ದಿ 768, ಸುನೀಲ ವಾಳ್ವೇಕರ 768, ನಾರಾಯಣ ಖೋಡೆ 762, ಪ್ರಕಾಶ ಬುರಬುರೆ 766 ಮತಗಳಿಂದ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳು ಮತದಾನದ ಫಲಿತಾಂಶ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net