ರಮಾನಂದ ಹೆಗಡೆ ಮಳಗುಳಿ ನೇತೃತ್ವದ ತಂಡಕ್ಕೆ ಜಯ

SDP ELECTION
Published on

ಸಿದ್ದಾಪುರ: ಪಟ್ಟಣದ ಕೃಷಿ ಹುಟ್ಟುವಳಿ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘಕ್ಕೆ ಹಾಲಿ ಅಧ್ಯಕ್ಷ ರಮಾನಂದ ನಾರಾಯಣ ಹೆಗಡೆ ಮಳಗುಳಿ ಅವರ ನೇತೃತ್ವದ ತಂಡ ಜಯಗಳಿಸಿದೆ.

12 ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯಲ್ಲಿ 4 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನುಳಿದ 8 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿತ್ತು.

ಆಯ್ಕೆಯಾದವರಿವರು

ರಮಾನಂದ ನಾರಾಯಣ ಹೆಗಡೆ ಮಳಗುಳಿ, ಚಂದ್ರಶೇಖರ ಹನುಮಂತ ನಾಯ್ಕ ಬೇಡ್ಕಣಿ, ಗುರುಮೂರ್ತಿ ರಾಮಚಂದ್ರ ನಾಯ್ಕ ಹುಲಿಮನೆ, ಕೃಷ್ಣಮೂರ್ತಿ ರಾಮಚಂದ್ರ ಹೆಗಡೆ ಹೆಬ್ಕುಳಿ, ಗಣಪತಿ ಶ್ರೀಧರ ಭಟ್ಟ ಸಾರಂಗ ಬಾಳೆಕುಳಿ, ಮಧುಕೇಶ್ವರ ರಾಮಕೃಷ್ಣ ಹೆಗಡೆ ಬಕ್ಕೆಮನೆ, ಸುಬ್ರಾಯ ರಾಮಚಂದ್ರ ಹೆಗಡೆ ಕೊಡ್ಸರ, ನಾಗರಾಜ ತಿಮ್ಮ ನಾಯ್ಕ ಶುಂಠಿ ಕೊಲಸಿರ್ಸಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು

ನಾಗರಾಜ ಶಂಕರ ಗೌಡರ್ ಹೆಗ್ಗೋಡಮನೆ, ಗಣಪತಿ ಹೊಳೆಯ ಬಿಲ್​ಛತ್ರಿ ಕನ್ನಳ್ಳಿ, ವಿನುತಾ ವಿನಾಯಕ ಹೆಗಡೆ ಕೆಳಗಿನಮನೆ ಹಾಗೂ ನೇತ್ರಾವತಿ ಈರಾ ಗೌಡ ಕಲ್ಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಿಟರ್ನಿಂಗ್ ಅಧಿಕಾರಿಯಾಗಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಎಲ್. ಗುಡುಕೇರಿ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net