ಸಚಿವ ಮಂಕಾಳ ವೈದ್ಯ ನೇತೃತ್ವದ ತಂಡಕ್ಕೆ ಗೆಲುವು

BKL
Published on

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳದ ಜನತಾ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಚಿವ ಮಂಕಾಳ ವೈದ್ಯ ನೇತೃತ್ವದ ತಂಡ ಎಲ್ಲ 13 ಸ್ಥಾನಗಳನ್ನ ಗೆದ್ದುಕೊಂಡಿದೆ.

ಬ್ಯಾಂಕಿನ ಹಿಂದಿನ ಅಧ್ಯಕ್ಷರಾಗಿದ್ದ ಸಚಿವ ಮಂಕಾಳ ವೈದ್ಯರು ಅತಿ ಹೆಚ್ಚು ಮತಗಳನ್ನು (608) ಪಡೆದರೆ, ನಂತರದ ಸ್ಥಾನವನ್ನು ರಾಮಚಂದ್ರ ಕಿಣಿ (519) ಪಡೆದರು. ಕೃಷ್ಣ ನಾಯ್ಕ (509), ಕೃಷ್ಣಾನಂದ ಪೈ (498), ಪರಮೇಶ್ವರ ದೇವಾಡಿಗ (489), ಪರಮೇಶ್ವರ ನಾಯ್ಕ (482), ತಿಮ್ಮಪ್ಪ ನಾಯ್ಕ (463), ಮಹಿಳಾ ಮೀಸಲು ಕ್ಷೇತ್ರದಿಂದ ಗೀತಾ ನಾಯ್ಕ (528), ಲಕ್ಷ್ಮಿ ನಾಯ್ಕ (482), ಪರಿಶಿಷ್ಟ ಜಾತಿಯ ಕ್ಷೇತ್ರದಿಂದ ವೆಂಕಟರಮಣ ಮೊಗೇರ (506) ಆಯ್ಕೆಯಾದರು. ಹಿಂದುಳಿದ ‘ಬ’ ವರ್ಗದಿಂದ ಅಲ್ಬರ್ಟ್ ಡಿಕೋಸ್ತ, ಹಿಂದುಳಿದ ‘ಅ’ ವರ್ಗದಿಂದ ನಾಗಪ್ಪ ನಾಯ್ಕ ಮತ್ತು ಪರಿಶಿಷ್ಟ ಪಂಗಡದಿಂದ ಗೋವಿಂದ ಗೊಂಡರವರು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net