

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ 5 ವರ್ಷ ಅವಧಿಗೆ (2024ರಿಂದ 2029) ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಸಮಾನ ಮನಸ್ಕರ ತಂಡವು ಎಲ್ಲ ಕ್ಷೇತ್ರಗಳಲ್ಲಿ (13 ಸ್ಥಾನ) ಪ್ರಚಂಡ ಗೆಲುವು ಸಾಧಿಸಿದೆ.
ಚುನಾಚವಣೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಉರ್ದು ಶಿಕ್ಷಕರ ಸಂಘ ಮತ್ತು ಅನುದಾನಿತ ಶಿಕ್ಷಕರ ಸಂಘಗಳು ಸೇರಿ ತಮ್ಮದೇ ಆದ ಗುಂಪು ರಚಿಸಿ ತುರುಸಿನ ಸ್ಪರ್ಧೆ ನೀಡಿದ್ದರು. ಆದಾಗಯೂ ಅವರ ಅಭ್ಯರ್ಥಿಗಳು ಸೋಲುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ.
ಸಮಾನಮನಸ್ಕರ ತಂಡದಿಂದ ಸ್ಪರ್ಧಿಸಿದ್ದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಹರಳಯ್ಯ ದೊಡಮನಿ(179 ಮತ), ಪರಿಶಿಷ್ಟ ಜನಾಂಗ ಮೀಸಲು ಕ್ಷೇತ್ರದಿಂದ ಶ್ರೀದೇವಿ ದ್ಯಾವನಕೊಂಡ (201), ಹಿಂದುಳಿದ ಅ-ವರ್ಗ ಮೀಸಲು ಕ್ಷೇತ್ರದಿಂದ ಎಂ. ಆರ್. ಕಬ್ಬೇರ(206), ಹಿಂದುಳಿದ ಬ-ವರ್ಗ ಮೀಸಲು ಕ್ಷೇತ್ರದಿಂದ ಮಹೇಶ ಬಾಳಗಿ (196), ಮಹಿಳಾ ಮೀಸಲು ಕ್ಷೇತ್ರದಿಂದ ಸುಮಿತಾ ಹಿರೇಮಠ (179) ಹಾಗೂ ಜಬೀನಾ ಹುನಗುಂದ (151), ಸಾಮಾನ್ಯ ವರ್ಗದಿಂದ ಆಸಿಫ್ ಸವಣೂರ (155), ಇರ್ಫಾನ್ ಕವಲಗೇರಿ (130), ಎನ್.ಆರ್. ಕಟ್ಟಿಮನಿ (178), ಪ್ರಕಾಶ ರಾಠೋಡ (181), ಪ್ರಭಾವತಿ ನಿಂಬನಗೌಡ್ರ (160), ಮಂಜುಳಾ ಹಾರಿಕೊಪ್ಪ (166) ಮತ್ತು ಶಕುಂತಲಾ ಅರಮನಿ(184) ಮತಗಳನ್ನು ಪಡೆದು ಜಯ ಗಳಿಸಿದ್ದಾರೆ.
ಗೆಲುವು ಸಾಧಿಸಿದ ಸಮಾನ ಮನಸ್ಕರ ತಂಡದ ಸದಸ್ಯರು ಸೋಮವಾರ ನಗರದ ಉಳವಿ ಚೆನ್ನಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಡಾ. ಲತಾ ಮುಳ್ಳೂರ, ವೀಣಾ ಪಾಟೀಲ, ಪಿ.ಎಫ್. ಗುಡೇನಕಟ್ಟಿ, ವಿ.ಜಿ. ಸೇತಸನದಿ, ಆರ್.ಎಸ್. ಮುಲ್ಲಾ, ಶಿಕ್ಷಕ ಸಂಘಟನೆಗಳ ಸದಸ್ಯರು, ಸರ್ಕಾರಿ ಮತ್ತು ಅನುದಾನಿತ ಶಾಲೆ ಶಿಕ್ಷಕರು, ಇತರರು ಇದ್ದರು.