ನೀಲಿ, ಕೆಂಪು, ಹಸಿರು ಹೋರಾಟಕ್ಕೆ ಜಯ

Untitled-1
ಚನ್ನರಾಯಪಟ್ಟಣ ಭಾಗದ ರೈತರ ಭೂಸ್ವಾಧಿನ ರದ್ದು ಮಾಡಿದ ಹಿನ್ನೆಲೆಯಲ್ಲಿ ವಿವಿಧ ಸಂಟನೆಗಳು ದೊಡ್ಡಬಳ್ಳಾಪುರದ ಸಿದ್ದಲಿಂಗಯ್ಯ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡರಾದ ಸಂಜೀವನಾಯಕ್​, ರುದ್ರ ಆರಾಧ್ಯ, ಪಿ.ಎ.ವೆಂಕಟೇಶ್​, ಮುನಿಪಾಪಯ್ಯ, ಪರಮೇಶ್​, ಹನುಮೇಗೌಡ, ಮುತ್ತೇಗೌಡ, ಹಮಾಮ್​ ವೆಂಕಟೇಶ್​ ಇತರರು ಇದ್ದರು.
Published on

ದೊಡ್ಡಬಳ್ಳಾಪುರ : ಚನ್ನರಾಯಪಟ್ಟಣದ 17,77 ಎಕರೆ ಜಮೀನು ಸ್ವಾಧಿನವನ್ನು ರದ್ದು ಮಾಡಿದ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ತಾಲೂಕಿನ ವಿವಿಧ ಕನ್ನಡಪರ, ದಲಿತಪರ, ರೈತ, ಪ್ರಗತಿಪರ ಸಂಟನೆಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಂಗಳವಾರ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಸೇರಿದ ಹೋರಾಟಗಾರರು ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಕನ್ನಡಪರ ಹೋರಾಟಗಾರ ಸಂಜೀವನಾಯಕ್​, ಮೂರುವರೆ ವರ್ಷಗಳ ಸುದೀರ್ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿದೆ. ಭೂಸ್ವಾಧಿನ ರದ್ದು ಮಾಡಿ ರೈತರಿಗೆ ಸಹಾಯ ಮಾಡಿದೆ. ಈ ಗೆಲುವು ನೀಲಿ, ಕೆಂಪು, ಹಸಿರು ಸಂಕೇತ ಹೋರಾಟಕ್ಕೆ ಸಾಯಾಗಿದೆ. ಮುಂದೆಯೂ ಜನ ವಿರೋಧಿ ನಿಲುವುಗಳ ವಿರುದ್ಧ ಒಟ್ಟಾಗಿ ಹೋರಾಟ ಮಾಡುತ್ತೇವೆ. ಐತಿಹಾಸಿಕ ಹೋರಾಟಕ್ಕೆ ಬೆಂಬಲಿಸಿದ ಅಸಂಖ್ಯಾತ ಬೆಂಬಲಿಗರಿಗೆ, ರೈತರಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.

ರೈತ ಸಂದ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಭೂಸ್ವಾಧಿನ ಪ್ರಕ್ರಿಯೆ ಕೇವಲ ದೇವನಹಳ್ಳಿ ಮಾತ್ರವಲ್ಲ, ಎಲ್ಲ ಜಿಲ್ಲೆಯಿಂದಲೂ ದೂರವಾಗಬೇಕು. ಇಲ್ಲವಾದಲ್ಲಿ ಕುಡಿಯುವ ನೀರು ವಿಷವಾಗಿದೆ. ಮುಂದೆ ಉಸಿರಾಡುವ ಗಾಳಿಯೂ ವಿಷವಾಗುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಫಲವತ್ತಾದ ಭೂಮಿ ಹೊರತಪಡಿಸಿ ಬಂಜರು ಭೂಮಿ ಗುರುತಿಸಬೇಕು. ಇದರಿಂದ ಸ್ಥಳಿಯರಿಗೂ ಅನುಕೂಲವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net