ಶಾಂತಿಸದನ, ಕೆಎಚ್‌ಎಸ್, ಎಂವಿಎಸ್-ಎ ತಂಡಕ್ಕೆ ಜಯ

30 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರೋವರ್ಸ್ ಬಾಸ್ಕೆಟ್‌ಬಾಲ್ ಕ್ಲಬ್ ಆಶ್ರಯದಲ್ಲಿ ದಿ. ರಾಜೇಶ್ವರಿ ವಿಜಯ ಬಳ್ಳಾರಿ ಸ್ಮರಣಾರ್ಥ ಅಂತರ್ ಶಾಲಾ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಇಲ್ಲಿನ ಡಿ.ಸಿ. ಕಾಂಪೌಂಡ್ ಬಳಿಯ ರೋವರ್ಸ್ ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಇತ್ತೀಚೆಗೆ ಜರುಗಿತು.
ಪಂದ್ಯಾವಳಿಯಲ್ಲಿ ಒಟ್ಟು 25 ತಂಡಗಳು ಭಾಗವಹಿಸಿದ್ದವು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಾಂತಿಸದನ
ಶಾಲೆ ತಂಡವು ಸೇಂಟ್ ಜೋಸೆಫ್ ಶಾಲೆ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದರೆ, 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಧಾರವಾಡದ ಕೆಎಚ್‌ಎಸ್ ತಂಡವು ಹುಬ್ಬಳ್ಳಿಯ ಮಂಜುನಾಥ ನಗರದ ಕೆಎಲ್‌ಇ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
16 ವರ್ಷದ ಬಾಲಕಿಯರ ವಿಭಾಗದಲ್ಲಿ ಎಂವಿಎಸ್-ಎ ತಂಡವು ಎಂವಿಎಸ್-ಬಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆಯಿತು. ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಬಿ.ಟಿ. ರೆಡ್ಡಿ ಹಾಗೂ ಮಹೇಶ ಶೆಟ್ಟಿ ಬಹುಮಾನಗಳನ್ನು ವಿತರಿಸಿದರು.
ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಉಪಾಧ್ಯಕ್ಷರಾದ ವಿಜಯ ಬಳ್ಳಾರಿ, ಶ್ರೀಕಾಂತ ಕಂಚಿಬೈಲ, ರಾಮ ನಾಯಕ, ಕಾರ್ಯದರ್ಶಿ ಹರ್ಷ ತುರಮುರಿ, ಸಹಕಾರ್ಯದರ್ಶಿಗಳಾದ ರಾಜೇಂದ್ರ ಜಂಬಗಿ, ವೇಣುಗೋಪಾಲ ಉಡುಪಿ, ಖಜಾಂಚಿ ಶಿವು ಅಮೀನಗಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net