ಶರವಣ ಕುಮಾರ್ ತಂಡಕ್ಕೆ ಜಯ

Victory for Saravan Kumar's team
Published on

 ಕುಶಾಲನಗರ

ಗುರುವಾರ ನಡೆದ ಕುಶಾಲನಗರದ ಪ್ರತಿಷ್ಠಿತ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಬಣ ಮತ್ತೆ ಭರ್ಜರಿಯಾಗಿ ಜಯಗಳಿಸಿದೆ.

ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಇಲ್ಲಿಯ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮತದಾನ ನಡೆಯಿತು. ಮತದಾನದ ನಂತರ ಇಲ್ಲಿಯೇ ನಡೆದ ಮತ ಎಣಿಕೆ ಈ ಬಾರಿ ಬಿಜೆಪಿ ಬೆಂಬಲಿತ ಜಗದೀಶ್ ಮತ್ತು ತಂಡ ಸ್ಪರ್ಧಿಸಿದ್ದರಿಂದ ಕುತೂಹಲ ಮೂಡಿಸಿತ್ತು. ನಿರೀಕ್ಷೆಯಂತೆ ಟಿ.ಆರ್. ಶರವಣಕುಮಾರ್ ಬಣ ಆರಂಭದಿಂದಲೇ ಉತ್ತಮ ಮುನ್ನಡೆ ಸಾಧಿಸಿತ್ತು. ಜಗದೀಶ್ ಬಣ ಮೊದಲ ಯತ್ನದಲ್ಲೇ ಬಲಿಷ್ಠ ಎದುರಾಳಿಗಳಿಗೆ ಉತ್ತಮ ಪೈಪೋಟಿ‌ ನೀಡುವ ಪ್ರಯತ್ನ ನಡೆಸಿ ಗಮನ ಸೆಳೆಯಿತು.

ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಟಿ.ಆರ್. ಶರವಣಕುಮಾರ್ ಬಣದ ಅಮೃತ್ ವಿ.ಸಿ. ಅವಿರೋಧ ಆಯ್ಕೆ ಆಗಿದ್ದರು. ಉಳಿದಂತೆ ಸಾಮಾನ್ಯ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಜೋಸೆಫ್ ವಿಕ್ಟರ್ ಸೋನ್ಸ್ (516), ಎಂ.ವಿ.‌ ನಾರಾಯಣ (530), ಶಿವಪ್ರಕಾಶ್ ಎನ್.ಇ. (501), ನವೀನ್ ಎಲ್. (513),

ಶರತ್ ಕೆ.ಪಿ. (531), ಸುರೇಶ್ ಕುಮಾರ್ ಕೆ. (472), ಕೆ.ಎನ್. ಸುರೇಶ್ (523), ನವೀನ್ ಜಿ.ಡಿ (486) ಹಾಗೂ ಶರವಣಕುಮಾರ್ ಟಿ.ಆರ್. (562) ವಿಜಯಿಯಾದರು. ಜಗದೀಶ್ ಬಣದ ಪ್ರವೀಣ್‌ಕುಮಾರ್  ಬಿ.ವಿ. (214),

ಭಾಸ್ಕರ್ ಎಂ.ಎಸ್. (198) ಹಾಗೂ ರಜನಿಕಾಂತ್ ಎಂ.ಜೆ‌. (206) ಸೋಲು ಅನುಭವಿಸುವಂತಾಯಿತು.

ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಶರವಣಕುಮಾರ್ ಬಣದ ಕವಿತಾ ಪಿ.ಎಂ. (508) ಹಾಗೂ ಕೃತಿಕಾ ಪೊನ್ನಪ್ಪ (500) ಗೆಲುವಿನ ನಗೆ ಬೀರಿದರೆ, ಜಗದೀಶ್ ಬಣದ ಇಂದಿರಾ ರಮೇಶ್ (223) ಪರಾಜಿತರಾದರು. ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಶರವಣಕುಮಾರ್ ಬಣದ ಶಾಹಿರ್ ಎಂ.ಎಂ. (436) ಗೆಲುವು‌ ಸಾಧಿಸಿದರೆ, ಜಗದೀಶ್ ಬಣದ ಪೃಥ್ವಿರಾಜ್ ಬಿ.ಕೆ (220) ಸೋಲುಂಡರು. ಪರಿಶಿಷ್ಟ ಜಾತಿ ಕ್ಷೇತ್ರದಿಂದ‌ ಶರವಣ ಕುಮಾರ್ ಬಣದ ರಾಮಕೃಷ್ಣಯ್ಯ ಬಿ. (493) ಗೆಲುವಿನ ನಗು ಬೀರಿದರೆ ಜಗದೀಶ್ ಬಣದ ರಾಮು(ಕೃಷ್ಣ) ಸಿ. (162) ಸೋಲಿನ ಕಹಿ ಅನುಭವಿಸಿದರು. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶರವಣ ಕುಮಾರ್ ಬಣದ ಕೀರ್ತಿಲಕ್ಷ್ಮೀ  ಆರ್.ಜಿ. (430) ಗೆಲುವು ಸಾಧಿಸಿದರೆ ಜಗದೀಶ್ ಬಣದ ಜಗದೀಶ್ ಬಿ.ಎಲ್. (221) ಪರಾಭವ ಹೊಂದಿದರು.

ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಒಟ್ಟು 721 ಮತದಾರರು ಇದ್ದಾರೆ. ಇದರಲ್ಲಿ 663 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಸಹಕಾರ ಇಲಾಖೆ ಪ್ರಥಮ ದರ್ಜೆ ಸಹಾಯಕ ಸಂದೀಪ್ ಬಿ.ಜಿ. ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಫಲಿತಾಂಶ ಪ್ರಕಟವಾದ ನಂತರ ಗೆಲುವು ಸಾಧಿಸಿದ‌ ಅಭ್ಯರ್ಥಿಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net