

ಕೊಳ್ಳೇಗಾಲ: ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಇತ್ತೀಚೆಗೆ 3 ವರ್ಷಗಳ ಅವಧಿಗೆ ನಡೆದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ತಾಲೂಕು ಸಮಿತಿಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರೇವಣ್ಣ ಅವರ 12 ಬೆಂಬಲಿಗರು ಜಯಗಳಿಸಿದ್ದಾರೆ.
14 ಮಂದಿ ಪ್ರತಿನಿಧಿಗಳ ಪೈಕಿ ಹಾಲಿ ಅಧ್ಯಕ್ಷ ರೇವಣ್ಣ ಬೆಂಬಲಿಗರು 12 ಜನ ಜಯಗಳಿಸಿದ್ದಾರೆ. ಪ್ರತಿ ಸ್ಪರ್ಧಿ ಬಣ 2 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 28 ಜನರ ಪೈಕಿ 14 ಜನರು ಅಧಿಕ ಮತಗಳನ್ನು ಪಡೆಯುವ ಮೂಲಕ ಜಯಶೀಲರಾದರು.
ಸ್ಪರ್ಧಿಗಳಾದ ಎಚ್.ರೇವಣ್ಣ (90 ಮತಗಳು), ಎಂ.ನಂಜುಂಡೇಗೌಡ (85), ಆದಿಲ್ ಪಾಷ (81), ಡಿ.ಹೊಂಬಾಳಯ್ಯ (81), ಡಿ.ಪ್ರಸನ್ನ ಕುಮಾರ್ (79), ಬಿ.ಮಹದೇವಸ್ವಾಮಿ (78), ಎಂ.ಗಣಪತಿ(75), ವಿನ್ಸೆಂಟ್ (75), ಆರ್.ಎಸ್ ಮಂಜೇಶ್ (73), ಎಂ.ಚಂದ್ರಾದಿತ್ಯ (72), ಎಂ.ಮಹದೇವಸ್ವಾಮಿ (71), ಎಂ.ಎನ್.ಮಂಜುನಾಥ ( 68), ಎಂ. ಸಿದ್ದರಾಜು(67), ಕೆ.ಎನ್.ಕೃಷ್ಣಪ್ಪ (65) ಜಯಗಳಿಸಿದ್ದಾರೆ. ಈ ವೇಳೆ ಗೆಲುವು ಸಾಧಿಸಿದ ಪ್ರತಿನಿಧಿಗಳಿಗೆ ನೌಕರರು ಹಾಗೂ ಅಧಿಕಾರಿ ವರ್ಗದವರು ಹಾರ ಹಾಕಿ ಸನ್ಮಾನಿಸಿದರು.
ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ವಕೀಲ ಶಿವಸ್ವಾಮಿ, ಸಹಾಯಕ ಚುನಾವಣಾಧಿಕಾರಿ ವಕೀಲ ಎಸ್. ಮಧು ಕುಮಾರ್ ನಡೆಸಿಕೊಟ್ಟರು.