ಜೆಡಿಎಸ್ ಬೆಂಬಲಿತರಿಗೆ ಗೆಲುವು

22 bannur 1
ಬನ್ನೂರಿನ ಸಮೀಪದ ಚಾಮನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಚ್.ಎಂ.ಮಾದೇಗೌಡ ಮತ್ತು ಉಪಾಧ್ಯಕ್ಷ ಎಂ.ಎಸ್.ಜಯರಾಮೇಗೌಡರನ್ನು ಶನಿವಾರ ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ಅಭಿನಂದಿಸಿದರು. ನೂತನ ನಿರ್ದೇಶಕರು, ಜೆಡಿಎಸ್‌ನ ಕಾರ್ಯಕರ್ತರು ಇದ್ದರು.
Published on

ಬನ್ನೂರು: ಪಟ್ಟಣದ ಚಾಮನಹಳ್ಳಿ ಪಿಎಸಿಸಿಎಸ್‌ನಲ್ಲಿ ಜೆಡಿಎಸ್ ಬೆಂಬಲಿತರ ಬಣ ಜಯಭೇರಿ ಬಾರಿಸಿದ್ದು, ಹರ್ಷ ತಂದಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಪಿಎಸಿಸಿಎಸ್ ಅಧಿಕಾರದ ಗದ್ದುಗೆ ಹಿಡಿದ ಜೆಡಿಎಸ್ ಬಣದ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಿಎಸಿಸಿಎಸ್ ಆವರಣದಲ್ಲಿ ಸನ್ಮಾನಿಸಿ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದು, ಎಲ್ಲ ಕ್ಷೇತ್ರದಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರಿಸಿದರು.

ಮುಂದಿನ ದಿನದಲ್ಲಿ ಇದರಿಂದ ಮುಕ್ತಿ ದೊರೆಯಲು ರೈತಪರ ಪಕ್ಷವನ್ನು ಆಡಳಿತಕ್ಕೆ ತರಬೇಕು. ರೈತ ಬೆಳೆಗೆ ಬೆಂಬಲ ಬೆಲೆ ದೊರೆಯಲು, ಉತ್ತಮ ಆಡಳಿತಕ್ಕೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ಎಂದರು.

ಚಾಮನಹಳ್ಳಿ ಪಿಎಸಿಸಿಎಸ್‌ನ ರೈತರೆಲ್ಲ ಒಗ್ಗಟ್ಟಾಗಿ ಎಲ್ಲ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಈ ಬಾರಿ ಗೆಲ್ಲಿಸುವ ಮೂಲಕ ಉತ್ತಮ ಆಡಳಿತಕ್ಕೆ ಅನುವು ಮಾಡಿ ಕೊಟ್ಟಿದ್ದು, ಗೆದ್ದಂತ ನಿರ್ದೇಶಕರು ರೈತರ ಕೆಲಸ ಮಾಡುವ ಮೂಲಕ ಪಿಎಸಿಸಿಎಸ್‌ನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ನಿರ್ದೇಶಕರಾದ ಬಿ.ದೇವರಾಜು, ಉಮೇಶ್, ವಿ.ಶಂಕರೇಗೌಡ, ಚೆನ್ನಮಲ್ಲು, ಲಕ್ಷ್ಮಮ್ಮ, ಗೋಪಾಲ, ಎಂ.ಸತೀಶ್, ಸಿ.ಪಿ.ವಿದ್ಯಾ, ಸಿ.ಎಸ್.ಮಂಜುನಾಥ, ಸೋಮಣ್ಣ ಸೇರಿದಂತೆ ಗ್ರಾಮದ ಜೆಡಿಎಸ್ ಮುಖಂಡರು ಹಾಗೂ ಬೆಂಬಲಿಗರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net