

ಭಟ್ಕಳ: ತಾಲೂಕಿನ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ (ಪಿಎಲ್ಡಿ) ಚುನಾವಣೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ತಂಡ ಭರ್ಜರಿ ಜಯ ಗಳಿಸಿದೆ.
ಆ. 13ರಂದು ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ಹಾಗೂ ಈಶ್ವರ ನಾಯ್ಕ ಸೇರಿ ಇತರರು ಸ್ಪರ್ಧಿಸಿದ್ದರು. ಹಿಂದುಳಿದ ‘ಅ’ ವರ್ಗದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಹಿಂದುಳಿದ ‘ಬ’ ವರ್ಗದಲ್ಲಿ ಎಂ.ಪಿ. ಶೈಲೇಂದ್ರಕುಮಾರ, ಸಾಲಗಾರ ಮಹಿಳೆ ವಿಭಾಗದಲ್ಲಿ ಗಾಯತ್ರಿ ವಿಜಯಕುಮಾರ ನಾಯ್ಕ, ಪುರ್ಣಿಮಾ ಕೃಷ್ಣಾ ನಾಯ್ಕ, ಪರಿಶಿಷ್ಟ ಜಾತಿಯಲ್ಲಿ ಮಂಜು ಮೊಗೇರ, ಪರಿಶಿಷ್ಟ ಪಂಗಡದಲ್ಲಿ ನಾಗಪ್ಪ ಕುಪ್ಪಯ್ಯ ಗೊಂಡ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಈಶ್ವರ ಮಂಜುನಾಥ ನಾಯ್ಕ, ಸಾಲಗಾರರ ಸಾಮಾನ್ಯ ಮತದಾರರ ಕ್ಷೇತ್ರದಲ್ಲಿ ಸುರೇಶ ನಾಯ್ಕ, ನವನೀತ ನಾಯ್ಕ, ಸಂತೋಷ ನಾಯ್ಕ, ಮಂಜಪ್ಪ ನಾಯ್ಕ, ಹನುಮಂತ ನಾಯ್ಕ, ಮಂಜುನಾಥ ನಾಯ್ಕ, ಈರಾ ನಾಯ್ಕ, ದೇವಿದಾಸ ನಾಯ್ಕ ವಿಜಯಿಯಾಗಿದ್ದಾರೆ.