

ಬಣಕಲ್: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಬಹುಮತ ಪಡೆದು ವಿಜೇತರಾಗಿರುವ ಹಿನ್ನಲೆಯಲ್ಲಿ ಬಣಕಲ್, ಕೊಟ್ಟಿಗೆಹಾರ, ಜಾವಳಿ ಮುಂತಾದ ಕಡೆಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜಾವಳಿ ಮುಖಂಡ ಪರೀಕ್ಷಿತ್ ಜಾವಳಿ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆ ಚುನಾವಣೆಯಲ್ಲಿ 2,19,695 ಮತಗಳ ಅಂತರದಿಂದ ಜಯಗಳಿಸಿರುವುದು ಸಂತಸ ತಂದಿದೆ. ಕೋಟ ಶ್ರೀನಿವಾಸ ಪೂಜಾರಿ ಬಡ ಕುಟುಂಬದಿಂದ ಬಂದಿದ್ದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಮುಖಂಡರಾದ ಶಶಿಧರ್, ಕೃಷ್ಣ ಟೈಲರ್,ಅಭಿ, ಕಾರ್ತಿಕ್, ಪ್ರತೀಶ್, ಸಂಪತ್, ಮಂಜುನಾಥ್ ಮತ್ತಿತರರು ಇದ್ದರು.
ಕೊಟ್ಟಿಗೆಹಾರದಲ್ಲೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರಾದ ವೇಣುಗೋಪಾಲ ಪೈ, ಟಿ.ಎಂ.ನರೇಂದ್ರಗೌಡ, ಸಾಗರ್ ತರುವೆ, ಎ.ಎಸ್.ಅಶ್ವತ್ಥ್, ಮೋಹನ್ ಬಿನ್ನಡಿ, ದೇವೇಂದ್ರ, ಹರೀಶ್ ಆಚಾರ್ ಮುಂತಾದವರು ಇದ್ದರು.