

ವಿಜಯಪುರ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆದ ಹಿನ್ನೆಲೆ ನಗರದ ಸಿದ್ಧೇಶ್ವರ ದೇವಸ್ಥಾನ ಬಳಿ ಬಸನಗೌಡ ಪಾಟೀಲ ಯತ್ನಾಳರ ಅಭಿಮಾನಿ ಬಳಗದಿಂದ ಬುಧವಾರ ವಿಜಯೋತ್ಸವ ಆಚರಿಸಲಾಯಿತು.
ಇಲ್ಲಿನ ಸಿದ್ಧೇಶ್ವರ ದೇವಸ್ಥಾನ ಬಳಿ ಸೇರಿದ ನೂರಾರು ಕಾರ್ಯಕರ್ತರು ಮೊದಲಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪರಸ್ಪರ ಸಿಹಿ ವಿತರಿಸಿ ಸಂಭ್ರಮಿಸಿದರು. ಬೋಲೋ ಭಾರತ ಮಾತಾ ಕೀ ಜೈ, ಒಂದೇ ಮಾತರಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯವಾಗಲಿ, ವಕ್ಫ್ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜಯವಾಗಲಿ ಎಂಬ ೂಷಣೆ ಮೊಳಗಿಸಿದರು.
ಸ್ವಾಮಿ ವಿವೇಕಾನಂದ ಸೇನೆ ಅಧ್ಯ ರಾವ ಅಣ್ಣಿಗೇರಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಅಮೂಲ್ಯ ಸಂವಿಧಾನದಲ್ಲಿ ಎಲ್ಲಿಯೂ ವಕ್ಫ್ ಕಾಯ್ದೆ ಬಗ್ಗೆ ಉಲ್ಲೆಖವಿಲ್ಲ. ಕೇವಲ ವೋಟಿನ ದುರಾಸೆಗಾಗಿ ನೆಹರು ಈ ಕಾಯ್ದೆ ಜಾರಿಗೆ ತಂದು ಸಂವಿಧಾನಕ್ಕೆ ಅಪಮಾನ ಮಾಡಿದರು. ಈ ಕಾಯ್ದೆ ಬಳಸಿ ಅಮಾಯಕರ, ಮಠ ಮಾನ್ಯಗಳ, ಸರ್ಕಾರಿ ಆಸ್ತಿ ಕಬಳಿಸುತ್ತಿದ್ದರು. ಸದ್ಯ ಅದನ್ನು ತಡೆಯುವ ನಿಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರು ನಡೆಸಿದ ಹೋರಾಟ ಪ್ರಧಾನಿ ಮೋದಿಯವರ ಗಮನಸೆಳೆದುದ್ದರ ಫಲವಾಗಿ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದೆ. ಇದು ಪ್ರತಿಯೊಬ್ಬ ದೇಶ ಭಕ್ತರ ಗೆಲುವು, ಮೋದಿಯವರ ಗೆಲುವು, ಬಸನಗೌಡರ ಗೆಲುವಾಗಿದೆ ಎಂದು ತಿಳಿಸಿದರು.
ವಕ್ಫ್ ಕಾಯ್ದೆ ವಿರುದ್ಧ ಸಾಕಷ್ಟು ಹಿಂದು ಸಂಸದರು ಮತ ನೀಡಿದ್ದಾರೆ. ವೋಟಿಗ್ ಆಸೆಗಾಗಿ ವಿರುದ್ಧ ಮತ ನೀಡಿರುವವರನ್ನು ಪ್ರತಿಯೊಬ್ಬ ರಾಷ್ಟ್ರ ಭಕ್ತರು ಪ್ರಶ್ನಿಸಬೇಕು ಎಂದು ಹೇಳಿದರು.
ಮುಖಂಡ ಡಾ. ಬಿ.ಎಸ್. ಪಾಟೀಲ ನಾಗರಾಳ ಹುಲಿ ಮಾತನಾಡಿ, ಕ್ಯಾನ್ಸರ್ ರೋಗದಂತಿರುವ ವಕ್ಫ್ ಕಾಯ್ದೆ ಬದಲಿಸಲು ಹಾಗೂ ಜನರ ಆತಂಕ ದೂರು ಮಾಡಲು ಬಸನಗೌಡ ಪಾಟೀಲ ಯತ್ನಾಳರು ಇಡೀ ರಾಜ್ಯ ಸುತ್ತಿ ಗಟ್ಟಿತನದ ಹೋರಾಟ ಮಾಡಿದ್ದರು. ಅಲ್ಲದೆ, ಈ ಕುರಿತು ಸಾಕಷ್ಟು ದಾಖಲೆ ಸಂಗ್ರಹಿಸಿ ಕೇಂದ್ರಕ್ಕೆ ನೀಡಿದ್ದರ ಫಲವಾಗಿ ಇಂದು ಕಾಯ್ದೆ ತಿದ್ದುಪಡಿದೆ ನೆರವಾಗಿದೆ ಎಂದರು.
ಮುಖಂಡ ಪ್ರೇಮಾನಂದ ಬಿರಾದಾರ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯ ಶಂಕರ ಹೂಗಾರ, ಯುವ ಮುಖಂಡ ಪ್ರತಾಪ ಚಿಕ್ಕಲಕಿ ಮಾತನಾಡಿದರು.
ಮುಖಂಡರಾದ ಎಂ.ಎಸ್. ರುದ್ರಗೌಡರ, ಗುರು ಗಚ್ಚಿನಮಠ, ಎಂ.ಎಸ್. ಕರಡಿ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ವಿಠಲ ಹೊಸಪೇಟೆ, ಜವಾಹರ ಗೋಸಾವಿ, ಮಲ್ಲಿಕಾರ್ಜುನ ಗಡಗಿ, ಗಿರೀಶ ಪಾಟೀಲ, ಪಾಂಡುಸಾಹುಕಾರ ದೊಡ್ಡಮನಿ, ದತ್ತಾ ಗೊಲಂಡೆ, ಸಂತೋಷ ಪಾಟೀಲ, ದಾದಾಸಾಹೇಬ್ ಬಾಗಾಯತ, ಲಕ್ಷ$್ಮಣ ಜಾಧವ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಚಂದ್ರು ಚೌದರಿ, ಬಾಬು ಶಿರಶ್ಯಾಡ, ವಿಠಲ ನಡುವಿನಕೇರಿ, ರಾಚು ಬಿರಾದಾರ, ಪ್ರವಿಣ ವಂದಾಲಮಠ, ಲಕ್ಷಿ$್ಮ ಕನ್ನೊಳ್ಳಿ, ರಾಜಲಕ್ಷಿ$್ಮ ಪರ್ವತನವರ, ಸುಚೇತಾ ಜಾಧವ ಮತ್ತಿತರರಿದ್ದರು.