

ನರೇಗಲ್ಲ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಹಗಲಿರುಳು ಶ್ರಮಿಸಿದ್ದರಿಂದ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮತದಾರರಿಗೆ ಧನ್ಯವಾದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜನರು ಕಾಂಗ್ರೆಸ್ ಗೆಲ್ಲಿಸಿ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲಾಗುವುದು. ಕ್ಷೇತ್ರ ಕೃಷಿ ಆಧಾರಿತವಾಗಿದ್ದರಿಂದ ಕೃಷಿಗೆ ಆದ್ಯತೆ ನೀಡಲಾಗುವುದು. ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಯಲ್ಲಾಲಿಂಗೇಶ್ವರ ಮಠ ಬಸವರಾಜ ಬಸವರಡ್ಡೆರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಬಸವರಾಜ ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಣ್ಣ ಬಂಡಿ, ಐ.ಎಸ್. ಪಾಟೀಲ, ಆರ್.ಬಿ. ಬಸವರಡ್ಡೆರ, ರೂಪಾ ಅಂಗಡಿ, ವಿ.ಬಿ. ಸೋಮನಕಟ್ಟೆಮಠ, ಬಸವರಾಜ ನವಲಗುಂದ, ವೀರಣ್ಣ ಶೆಟ್ಟರ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಅಭಯ ಪಾಟೀಲ, ಶರಣಪ್ಪ ಬೆಟಗೇರಿ, ಮಂಜುನಾಥ ಅಂಗಡಿ, ಗುರಣ್ಣ ಅವರಡ್ಡಿ, ಸಕ್ರಗೌಡ ಪಾಟೀಲ, ಎಚ್.ಟಿ ದ್ವಾಸಲ, ಎ.ವಿ ವೀರಾಪೂರ, ಸುರೇಶ ಬಸವರಡ್ಡೇರ, ಶಿವಪುತ್ರಪ್ಪ ಕೆಂಗಾರ, ಸಂಗಪ್ಪ ಕುಂಬಾರ, ಶಿವಣ್ಣ ಗುಗ್ಗರಿ ಇತರರಿದ್ದರು. ಬಸವರಾಜ ತಳವಾರ ನಿರ್ವಹಿಸಿದರು.