

ವಿಜಯವಾಣಿ ಸುದ್ದಿಜಾಲ ಧಾರವಾಡ
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಹಾಗೂ ಸಂಸದ ಪ್ರಲ್ಹಾದ ಜೋಶಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಟಿಕಾರೆ ರಸ್ತೆ ರಾಮ ಮಂದಿರ ಎದುರು ಬಿಜೆಪಿ&ಜೆಡಿಎಸ್ ಕಾರ್ಯಕರ್ತರು ಭಾನುವಾರ ಸಂಜೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸಂಜೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಜೈ ಶ್ರೀರಾಮ..ಮೋದಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಿಸಿದರು. ನಂತರದಲ್ಲಿ ರಾಜ್ಯದ ಸಚಿವರಾದ ಪ್ರಲ್ಹಾದ ಜೋಶಿ, ನಿರ್ಮಲಾ ಸೀತಾರಾಮನ್, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರ ಹಿಡಿದು ಸಿಹಿ ಹಂಚಿದರು.
ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಪ್ರಮೋದ ಕಾರಕೂನ, ಜೆಡಿಎಸ್ ಪ್ರಧಾನ ಕಾರ್ಯದಶಿರ್ ಗೌಸ್ ನದಾಫ್, ಜಾಫರ್ ಖಾನ್ ಪಠಾಣ, ಮಹದೇವ್ ಚೌಡಿ, ದೊಡ್ಡವಾಡ, ರಾಜು ಚಂದನಕರ, ನವೀನ ರಾಟಿ, ತೇಜ ಸುತಾರ, ವಿನೋದ ಹೆಣಮರ, ಗೌತಮ್ ದೇಶಮಾನಿ, ಲೋಹಿತ್ ಪವಾರ್, ಕೇಶವ ತೆಲುಗು, ಚಿಂತಾಮಣಿ, ದತ್ತಾತ್ರೇಯ ರಾಮದುರ್ಗ, ಬಿರುಲಾಲ್ ಜೈನ್, ಇತರರು ಇದ್ದರು.