ಒಂದು ಲಕ್ಷ ಮತಗಳ ಅಂತರದಿಂದ ಗೆಲುವು

1
ಪ್ರಿಯಾಂಕಾ ಜಾರಕಿಹೊಳಿ
Published on

ಉಳ್ಳಾಗಡ್ಡಿ-ಖಾನಾಪುರ: ಚಿಕ್ಕೋಡಿ ಕ್ಷೇತ್ರದ ವ್ಯಾಪ್ತಿಯ ಹಳೇ ವಂಟಮೂರಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-95ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಂಗಳವಾರ ಸರತಿಯಲ್ಲಿ ನಿಂತು ಮತ ಚಲಾಯಿಸಿದರು.

ಯಮಕನಮರಡಿ ಗ್ರಾಮದ ಮತಗಟ್ಟೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, 8 ಕ್ಷೇತ್ರಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನು ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಎಲ್ಲರೂ ಮನೆ ಮಗಳಂತೆ ನನಗೆ ಆಶೀರ್ವದಿಸಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದೇನೆ.

ಸುಡುವ ಬಿಸಿಲನ್ನು ಲೆಕ್ಕಿಸದೆ ಸಚಿವರು, ಕಾಂಗ್ರೆಸ್ ಪಕ್ಷದ ಶಾಸಕರು, ರಾಜ್ಯದ ನಾಯಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವ ಮೂಲಕ ನನ್ನ ಪರವಾಗಿ ಮತಯಾಚಿಸಿದ್ದಾರೆ. 8 ಕ್ಷೇತ್ರದಲ್ಲಿ ಜನ ನನಗೆ ನೀಡಿರುವ ಬೆಂಬಲ, ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ ಎಂದರು.

ಕಿರಣಸಿಂಗ್ ರಜಪೂತ, ಈರಣ್ಣ ಬಿಸಿರೊಟ್ಟಿ, ರವಿಂದ್ರ ಜಿಂಡ್ರಾಳಿ, ಮಹಾಂತೇಶ ಮಗದುಮ್ಮ, ಶೌಕತ್ ಖಾಜಿ, ಅಸ್ಲ್‌ಂ ಪಕಾಲಿ, ರಾಜೇಸಾಬ್ ಫಣಿಬಂದ, ಅಭಿಜಿತ ಪಾಟೀಲ, ಸಿದ್ದಪ್ಪ ಶಿಳ್ಳಿ, ಉಮೇಶ ಅವಲಕ್ಕಿ, ಗಿರೀಶ ಮಿಶ್ರಕೋಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net