

ಗೊಳಸಂಗಿ: ಕ್ರೀಡೆ ಯಾವುದೇ ಇರಲಿ, ಇಲ್ಲಿ ಸೋಲು-ಗೆಲುವು ಎಂಬುದು ಒಂದೇ ನಾಣ್ಯದ ಎರಡು ಮುಖಗಳಾಗಿರುತ್ತವೆ ಎಂಬ ಸತ್ಯವನ್ನು ಪ್ರತಿಯೊಬ್ಬ ಆಟಗಾರರು ಮನವರಿಕೆ ಮಾಡಿಕೊಂಡಿರಬೇಕು ಎಂದು ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಮಹಾಶಕ್ತಿ ನಗರದ ಮಿತಾಲಿ ಮಹಿಳಾ ಮಂಡಳದ ಅಧ್ಯಕ್ಷೆ ಸಾಧನಾ ಪಾಂಡೆ ಸಲಹೆ ನೀಡಿದರು.
ಬಸವನಬಾಗೇವಾಡಿ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಖೋಖೋ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಕ್ರೀಡೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಕುತಂತ್ರದಿಂದ ಪಡೆದ ಗೆಲುವು ಕ್ಷಣಿಕ ಮಾತ್ರ ಸುಖ ನೀಡಲಿದೆ ಎಂದರು.
ನೆಹರು ಯುವಕ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ ಮಾತನಾಡಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರ್ಜುನ ಪವಾರ ಅಧ್ಯಕ್ಷತೆ ವಹಿಸಿದ್ದರು. ಪಪೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಹೊಸಮನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ ಕ್ರೀಡಾಜ್ಯೋತಿಯನ್ನು ಬರಮಾಡಿಕೊಂಡರು.
ಗ್ರಾಪಂ ಅಧ್ಯಕ್ಷ ಕೇಶವ ಪವಾರ, ಪಿಕೆಪಿಎಸ್ ಅಧ್ಯಕ್ಷ ಮಹಿಬೂಬ ಹತ್ತರಕಿಹಾಳ, ಪ್ರಮುಖರಾದ ಅಯ್ಯಪ್ಪ ಪರಮಗೊಂಡ, ಪ್ರಕಾಶ ಗೊಂಗಡಿ, ಸಹದೇವ ಪವಾರ, ಬಂದೇನವಾಜ ಡೋಲಚಿ, ಗಂಗಾರಾಮ ಪವಾರ, ರಾಜಶೇಖರ ರೂಡಗಿ, ಡಾ. ಮಲ್ಹಾರಿ ಪವಾರ, ವಿ.ಎಸ್. ಕಲಾದಗಿ, ಪ್ರಾಚಾರ್ಯ ವಿ.ಪಿ. ಕಟ್ಟಿ, ಎನ್‌ಟಿಪಿಸಿ ಮಹಿಳಾ ಮಿತಾಲಿ ಮಂಡಳಿ ಸದಸ್ಯರಾದ ಸುಭಾಷಿನಿ, ರಮ್ಯ, ವಿದ್ಯಾ, ನಿರ್ಮಲಾ, ಜ್ಯೋತಿ ಮತ್ತಿತರರು ಇದ್ದರು. ತಾಲೂಕು ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಿಂದ 8 ಮತ್ತು ಬಾಲಕರ ವಿಭಾಗದಿಂದ 11 ತಂಡಗಳು ಭಾಗಿಯಾಗಿದ್ದವು.