ಸಂತ್ರಸ್ತರಿಗೆ ನೆರವಾಗದ ಪ್ರಧಾನಿ ನರೇಂದ್ರ ಮೋದಿ - ಹಿರಿಯ ರಂಗಕರ್ಮಿ ಪ್ರಸನ್ನ ಅಸಮಾಧಾನ

Prasanna
Published on

ರಾಯಚೂರು: ತುಮಕೂರಿನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪರ ಬೇಡಿಕೆಗೆ ಸ್ಪಂದಿಸದೇ ಪ್ರಧಾನಿ ಮೋದಿ ಅಸಡ್ಡೆ ತೋರಿದ್ದಾರೆ. ಸಮಸ್ಯೆಯನ್ನು ಆಲಿಸುವ ಕೆಲಸವನ್ನಾದರೂ ಪ್ರಧಾನಿ ಮಾಡಬಹುದಾಗಿತ್ತು. ಪ್ರವಾಹ ಪೀಡಿತರ ಸಂಕಷ್ಟಕ್ಕೆ ನೆರವಾಗದ ಪ್ರಧಾನಿ ವರ್ತನೆ ಖಂಡನೀಯ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರ ಅವರು, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮ ಸೇವಾ ಸಂಘದಿಂದ ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ಆರಂಭಿಸಲಾಗಿದೆ. ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕೆ ಸಚಿವರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ. ಗುಡಿ ಕೈಗಾರಿಕೆಗಳಿಗೆ ಶೂನ್ಯ ತೆರಿಗೆ ವಿಧಿಸುವಂತೆ ಮನವಿ ಮಾಡಲಾಗಿದೆ. ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂ. ರಿಯಾಯಿತಿ ನೀಡುವ ಸರ್ಕಾರ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಭಾರತವು ಸ್ಥಳೀಯ ವ್ಯಾಪಾರವನ್ನು ನಂಬಿಕೊಂಡಿರುವ ಆರ್ಥಿಕತೆಯಾಗಿದೆ. ಈ ಕ್ಷೇತ್ರದಲ್ಲಿ ಸರ್ಕಾರ ಹಣ ತೊಡಗಿಸುವ ಬದಲು ದೊಡ್ಡ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಸೇವಾ ಸಂಘದ ಪದಾಧಿಕಾರಿಗಳಾದ ವಿದ್ಯಾ ಪಾಟೀಲ್, ಶಿವರಾಮರೆಡ್ಡಿ, ಕೆ.ಪಿ.ಅನಿಲಕುಮಾರ, ಬಸವರಾಜ, ಸ್ವಪ್ನದೀಪಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net