ಪ್ಲಾಸ್ಮಾತಂತ್ರಜ್ಞಾನದಕುರಿತುರಾಷ್ಟ್ರೀಯ ವಿಚಾರ ಸಂಕಿರಣ

PTR_30 AUG_5
Published on

ಪುತ್ತೂರು: ತಂತ್ರಜ್ಞಾನ ಬೆಳವಣಿಗೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮಗೆ ಸಂಶೋಧನೆ ನಡೆಸಲು ಹಲವಾರು ಅವಕಾಶಗಳಿವೆ. ನಾವು ಯಾವುದೇ ಸಂಶೋಧನೆಯನ್ನು ಪ್ರಾರಂಭಿಸಬೇಕಾದರೆ ಮೊದಲುಅದರ ಮೂಲದಿಂದಆರಂಭಿಸಬೇಕು. ನಮ್ಮಿಂದ ಯಾವ ಕಾರ್ಯ ಸಾಧ್ಯ ಎಂಬುದನ್ನು ನಾವು ಮೊದಲು ಯೋಚಿಸಬೇಕು ಎಂದು ಜಿ.ಎಮ್.ಆರ್. ಟಿ ವೀಕ್ಷಣಾಲಯ, ಟಾಟಾ ಮೂಲಭೂತ ಸಂಶೋಧನಾಕೇಂದ್ರ ಪೂನಾ ಇದರಡೀನ್ ಪ್ರೊ.ಈಶ್ವರಚಂದ್ರ ಸಿ.ಎಚ್. ಹೇಳಿದರು.
ಅವರು ಬುಧವಾರ ಪ್ಲಾಸ್ಮಾ ಸಂಶೋಧನಾಕೇಂದ್ರ, ಅಹಮದಾಬಾದ್ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ) ಪುತ್ತೂರು, ಐಕ್ಯುಎಸಿ ಮತ್ತು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ಪ್ಲಾಸ್ಮಾತಂತ್ರಜ್ಞಾನದಕುರಿತುರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಾಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಹೊಸ ಆವಿ?ರದ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ಸಫಲರಾಗಬೇಕು. ಭಾರತೀಯ ವಿಜ್ಞಾನಿಗಳ ವೈಜ್ಞಾನಿಕ ಸಂಶೋಧನೆ ಜಗತ್ತಿನ ಹಿತಕ್ಕಾಗಿ ಆಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಕಲಿಯಲು ಇಂದು ಹಲವಾರು ಅವಕಾಶಗಳಿದ್ದು, ಪ್ಲಾಸ್ಮಾ ತಂತ್ರಜ್ಞಾನ ಕುರಿತಾದ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿ ಎಂದು ಹೇಳಿದರು.
ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್‌ಅಹಮದಾಬಾದ್‌ಇದರ ಮುಖ್ಯಸ್ಥ ಡಾ.ಎ.ವಿ. ರವಿಕುಮಾರ್ ಮಾತನಾಡಿ ಒಂದು ವಸ್ತುವನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಕೋನ ನಮಗೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ವಿಜ್ಞಾನ ಎಂಬುದು ಆಸಕ್ತಿದಾಯಕ ಮತ್ತು ಕುತೂಹಲದಾಯಕವಾದ ಕ್ಷೇತ್ರವಾಗಿದೆ. ನಾವು ವಿಜ್ಞಾನವನ್ನು ಕಲಿತು ಸಮಾಜಕ್ಕೆ ಏನನ್ನು ಮಾಡಬಹುದುಎಂಬುದನ್ನುಯೋಚಿಸಬೇಕು ಎಂದು ಹೇಳಿದರು.
ಸುಬ್ರಹ್ಮಣ್ಯ ಕುಮಾರಸ್ವಾಮಿ ಪದವಿಪೂರ್ವಕಾಲೇಜು ಪ್ರಾಂಶುಪಾಲ ಡಾ. ಸಂಕೀರ್ತನ್ ಹೆಬ್ಬಾರ್ ಪ್ಲಾಸ್ಮಾ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಹಮದಾಬಾದ್ ಐ.ಪಿ.ಆರ್. ಸಮುದಾಯ ಸಂಪರ್ಕ ವಿಭಾಗ ಮುಖ್ಯಸ್ಥ ಡಾ. ಎ.ವಿ. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿಚಾರ ಸಂಕಿರಣ ನಡೆಯಿತು. ಮೂರು ದಿನ ನಡೆಯಲಿರುವ ಪ್ಲಾಸ್ಮಾ ಪ್ರದರ್ಶನ ನಡೆಯಲಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃ? ಭಟ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಮತ್ತು ಹಿರಿಯ ವಿಜ್ಞಾನಿ ಎಮುಂಜ ಶಂಕರಜೋಯಿಸ, ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ನಿವಾಸ ಸಾಮಂತ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ, ಕಾಲೇಜಿನ ವಿಶೇ?ಅಧಿಕಾರಿ ಮತ್ತು ಪ್ರಭಾರ ಪ್ರಾಂಶುಪಾಲ ಡಾ.ಶ್ರೀಧರ್ ನ್ಯಾಕ್ ಬಿ, ಐಕ್ಯುಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದಉಪನ್ಯಾಸಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದಡೀನ್ ಡಾ. ವಿಜಯ ಸರಸ್ವತಿ ಸ್ವಾಗತಿಸಿದರು. ಕಲಾ ವಿಭಾಗದಡೀನ್ ಡಾ. ದುರ್ಗಾರತ್ನ.ಸಿ ವಂದಿಸಿದರು. ಸ್ನಾತಕೋತ್ತರ ವಿಭಾಗದ ಗಣಿತಶಾಸ್ತ್ರ ಉಪನ್ಯಾಸಕಿ ನಮೃತಾಕೆ. ಎನ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net