ಬೆಳೆ ನಾಶಪಡಿಸಿದ ದುರುಳರು

4Naregal1
Published on

ನರೇಗಲ್ಲ: ಫಲವತ್ತಾಗಿ ಬೆಳೆದು ನಿಂತಿದ್ದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ದುಷ್ಕರ್ವಿುಗಳು ನಾಶಪಡಿಸಿದ ಘಟನೆ ಸಮೀಪದ ಹಾಲಕೆರೆ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ನಡೆದಿದೆ.

ಹಾಲಕೆರೆ ಗ್ರಾಮದ ರೈತ ಬಸವರಾಜ ಅಂಗಡಿ ಅವರಿಗೆ ಸೇರಿದ ಜಮೀನಿನಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನ ಜಾವದ ಮಧ್ಯದಲ್ಲಿ ಈ ದುಷ್ಕೃತ್ಯ ನಡೆದಿದ್ದು, ನರೇಗಲ್ಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲಿಸಿದ್ದಾರೆ.

ಸುಮಾರು 3 ಎಕರೆ ಹೊಲದಲ್ಲಿ ಉತ್ತಮವಾಗಿ ಬೆಳೆದು ನಿಂತಿದ್ದ ಉಳ್ಳಾಗಡ್ಡಿ, ಹಸಿ ಮೆಣಸಿನಕಾಯಿ ಬೆಳೆಯನ್ನು ಟ್ರ್ಯಾಕ್ಟರ್ ಸಹಾಯದಿಂದ ಅಡ್ಡಾದಿಡ್ಡಿ ಚಾಲನೆ ಮಾಡುವ ಮೂಲಕ ಬೆಳೆ ನಾಶ ಮಾಡಿದ್ದಾರೆ. ಅಂದಾಜು 3.5 ಲಕ್ಷ ರೂ. ಹಾನಿಯಾಗಿದೆ ಎಂದು ರೈತ ಬಸವರಾಜ ಅಂಗಡಿ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net