ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷರಾಗಿ ಕಾಟಿಮಾಡ ಶರೀನ್ ಮುತ್ತಣ್ಣ ಆಯ್ಕೆ

vice president
Published on

ಮಡಿಕೇರಿ:

ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾಟಿಮಾಡ ಶರೀನ್ ಮುತ್ತಣ್ಣ ಅವಿರೋಧವಾಗಿ ಆಯ್ಕೆ ಆದರು. ಚುನಾವಣಾ ಅಧಿಕಾರಿ ತಾಲೂಕು ಮೀನುಗಾರಿಗೆ ಇಲಾಖೆಯ ಸಹಾಯ ನಿರ್ದೇಶಕÀ ಸಚಿನ್ ಸಮಕ್ಷಮದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಟಿಮಾಡ ಶರೀನ್ ಮುತ್ತಣ್ಣ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಅಯ್ಕೆಯಾದರು. ಅಂತರಿಕ ಒಳ ಒಪ್ಪಂದAತೆ ಈ ಹಿಂದಿನ ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ಅವರು ಕಾಟಿಮಾಡ ಶರೀನ್ ಮುತ್ತಣ್ಣನ ಅವರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು.

ನಂತರ ನಡೆದ ಸಮಾರಂಭದಲ್ಲಿ ನಿಕಟಪೂರ್ವ ಉಪಾಧ್ಯಕ್ಷ ಚಕ್ಕೇರ ಸೂರ್ಯಅಯ್ಯಪ್ಪ ಅವರು ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ಶ್ಲಾಘಿಸಿ ನೂತನ ಉಪಾಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಅವರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಅಮ್ಮಣಿ ಬೆಂಡೆಕುತ್ತಿ, ಸದಸ್ಯರುಗಳಾದ ಪಡಿಞರಂಡ ಕವಿತಾಪ್ರಭು, ರಾಜು, ಅಮ್ಮಯ್ಯ, ಸುಮತಿ, ಪಿಡಿಒ ಸುರೇಶ್, ಪ್ರಮುಖರಾದ ಕೊಟ್ಟಂಗಡ ಮಂಜುನಾಥ್, ಮಾಚಂಗಡ ವಿಕಾಸ್, ಪೊನ್ನಿಮಾಡ ಸಂತೋಷ್, ಅಳಮೇಂಡ ಸೋಮಯ್ಯ, ಚಕ್ಕೇರ ಬೋಪಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net