ವಿಜೃಂಭಣೆಯ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ

Vibrant Kalikadevi Palankki Festival
ಸಿಂದಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ ಅಮ್ಮನವರ ಪಲ್ಲಕ್ಕಿ ಮಹೋತ್ಸವ ಜರುಗಿತು. ರಾಮಚಂದ್ರ ಮಹಾ ಸ್ವಾಮಿಗಳು, ಶಿವಾನಂದ ಬಡಿಗೇರ, ರಾಚಪ್ಪ ಪತ್ತಾರ, ಸಿದ್ದು ಪತ್ತಾರ ಇತರರಿದ್ದರು.
Published on

ಸಿಂದಗಿ: ಪಟ್ಟಣದ ಕಾಳಿಕಾನಗರದಲ್ಲಿನ ಕಾಳಿಕಾದೇವಿ ಅಮ್ಮನವರ 38ನೆಯ ಜಾತ್ರೆ ನಿಮಿತ್ತ ಗುರುವಾರ ವಿಜೃಂಭಣೆಯಿಂದ ಪಲ್ಲಕ್ಕಿ ಮಹೋತ್ಸವ ಜರುಗಿತು.

ಬೆಳಗ್ಗೆ ಕಾಳಿಕಾದೇವಿ ಅಮ್ಮನವರಿಗೆ ಹೂವಿನ ವಿಶೇಷ ಅಲಂಕಾರದೊಂದಿಗೆ ಮೂರುರವದಮಠದ ರಾಮಚಂದ್ರ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿತು.

ನಂತರ ಪಲ್ಲಕ್ಕಿ ಉತ್ಸವಕ್ಕೆ ಕಿಣಗಿ ಅವರ ಮನೆಯಿಂದ ಕಾಳಿಕಾ ಅಮ್ಮನವರ ವಸಾಲಂಕಾರಗಳೊಂದಿಗೆ ಪೂಜಾ ಸಾಮಗ್ರಿ ತಂದು, ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ಉತ್ಸವವು ನಗರದ ಪ್ರಮುಖ ಬೀದಿಗಳ ಮೂಲಕ ಅಗಸೆಯಲ್ಲಿನ ಬಸವಣ್ಣ ದೇವರ ದೇವಸ್ಥಾನದವರೆಗೆ ಸಾಗಿ ಮರಳಿ ಮೂಲ ದೇವಸ್ಥಾನಕ್ಕೆ ಮರಳಿತು. ಉತ್ಸವದುದ್ದಕ್ಕೂ ಪುರವಂತರ ಸೇವೆ ಜರುಗಿತು. ನಂತರ ಅನ್ನ ಪ್ರಸಾದ ಸೇವೆ ನಡೆಯಿತು.

ಉತ್ಸವದಲ್ಲಿ ವಿಶ್ವಕರ್ಮ ಸಮಾಜದ ಅಧ್ಯ ಶಿವಾನಂದ ಬಡಿಗೇರ ಉಪಾಧ್ಯ ವಿನೋದ ಹಂಚಿನಾಳ, ಈರಣ್ಣ ವಿಶ್ವಕರ್ಮ, ಕಾರ್ಯದರ್ಶಿ ಶಾಮಸುಂದರ ಪತ್ತಾರ, ಗುರಪ್ಪ ಪತ್ತಾರ, ರಾಚಪ್ಪ ಪತ್ತಾರ, ವಿನಾಯಕ ಬಡಿಗೇರ, ಸಿದ್ದು ಪತ್ತಾರ, ರೇವಪ್ಪ ಪತ್ತಾರ, ಲಕ್ಷ$್ಮಣ ಪತ್ತಾರ, ಸೋಮನಾಥ ಹಂಚಿನಾಳ, ಪ್ರಭು ಹಂಚಿನಾಳ, ಕಮಲಾಕರ ಪತ್ತಾರ, ಶ್ರೀಶೈಲಗೌಡ ಬಿರಾದಾರ, ನಾಗು ಪತ್ತಾರ, ಕಾಳಪ್ಪ ಪತ್ತಾರ, ವಸಂತ ಹಂಚಿನಾಳ, ಶಿವಾನಂದ ಬಡಿಗೇರ ಮಹೇಶ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net