ವಿಜೃಂಭಣೆಯ ದುರ್ಗಾದೇವಿ ಮಹೋತ್ಸವ

14srl1
ಶಿರಾಳಕೊಪ್ಪದಲ್ಲಿ ದುರ್ಗಾದೇವಿ ಜಾತ್ರೆಯ ಅಂಗವಾಗಿ ಶ್ರೀಧರ್ ಜೋಯ್ಸ್ ನೇತೃತ್ವದಲ್ಲಿ ಚಂಡಿಕಾಯಾಗ ನಡೆಸಲಾಯಿತು.
Published on

ಶಿರಾಳಕೊಪ್ಪ: ಪಟ್ಟಣದಲ್ಲಿ ದುರ್ಗಾದೇವಿ ಮಹೋತ್ಸವವು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿAದ ನೆರವೇರಿತು. ಮೂರು ವಷÀðಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಪಟ್ಟಣದ ಎಲ್ಲ ವಗÀðದ ಜನರೂ ಪಾಲ್ಗೊಂಡಿದ್ದರು.
ಸೋಮವಾರ ಪಟ್ಟಣದ ಶ್ರೀಧರ್ ಜೋಯ್ಸ್ ನೇತೃತ್ವದಲ್ಲಿ ಮಹಾಗಣಪತಿ ಪೂಜೆಯೊಂದಿಗೆ ಪ್ರಾರಂಭವಾಗಿ ಶುದ್ಧ ಪುಣ್ಯಾಹ, ಬಿಂಬ ಶುದ್ದಿ, ಸ್ಥಳಶುದ್ಧಿ, ಕಂಕಣ ಧಾರಣೆ, ನವಗ್ರಹ ಪೂಜೆ, ಕಳಸ ಪ್ರತಿಷ್ಠಾಪನೆಯೊಂದಿಗೆ ದೇವಿ ಸಪ್ತಪತಿ ಪಾರಾಯಣ ನಡೆಸಲಾಯಿತು. ಮಂಗಳವಾರ ದೇವಿಯ ಸಮ್ಮುಖದಲ್ಲಿ ಚಂಡಿಕಾಯಾಗ ನಡೆಸಲಾಯಿತು. ನಂತರ ಪದ್ಧತಿಯಂತೆ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಸಾವಿರಾರು ಮಹಿಳೆಯರು ದೇವಿಗೆ ಉಡಿತುಂಬಿ ಪ್ರಾರ್ಥಿಸಿದರು. ರಾತ್ರಿ ದೇವಿಯ ರಾಜಬೀದಿ ಉತ್ಸವ ಅತ್ಯಂತ ವೈಭವ ದಿಂದ ಸಾವಿರಾರು ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಮುಂಜಾನೆವರೆಗೂ ಮೆರವಣಿಗೆ ನಡೆಯಿತು.
ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಶನಿವಾರ ಮುತ್ತೆÊದೆ ಮಾಡಿದ ನಂತರ ಉಡಿ ತುಂಬುವುದರೊAದಿಗೆ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ. ಟ್ರಸ್ಟ್ ಅಧ್ಯಕ್ಷ ಮಂಚಿ ಶಿವಣ್ಣ, ಕಾರ್ಯದರ್ಶಿ ಬೆನ್ನೂರು ಪ್ರಶಾಂತ, ಖಜಾಂಚಿ ಸೋಮಶೇಖರ ಶೆಟ್ಟಿ, ಪಪಂ ಮಾಜಿ ಅಧ್ಯಕ್ಷ ಚೆನ್ನವೀರಶಟ್ಟಿ, ಪದ್ದಣ್ಣ, ಮಹೇಶ್‌ಮೂರ್ತಿ, ಹನುಮಂತಪ್ಪ ಸಮಿತಿಯ ಇತರ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net