

ಮದ್ದೂರು: ಸಂಕಷ್ಟಹರ ಚತುರ್ಥಿ ಪ್ರಯುಕ್ತ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೋಟೆ ವಿನಾಯಕನಿಗೆ ಸೋಮವಾರದ ವಿಭೂತಿ ಅಲಂಕಾರ ಮಾಡಲಾಗಿತ್ತು.
ಸಂಜೆ ಕೋಟೆ ವಿನಾಯಕನಿಗೆ ಪಂಚಾಮೃತ ಅಭಿಷೇಕ, ಸಂಕಷ್ಟರ ವ್ರತ ಆಚರಣೆ ಮಾಡಲಾಯಿತು. ಬಳಿಕ ಸದ್ಭಕ್ತರಿಗೆ ಕಡಲೆಕಾಳು ಪ್ರಸಾದ ವಿತರಣೆ ಮಾಡಲಾಯಿತು. ಮುಂಜಾನೆಯಿಂದೇ ವಿಶೇಷ ಧಾರ್ಮಿಕ ಕಾರ್ಯಕ್ರಮ ದೇಗುಲದ ಪ್ರಧಾನ ಅರ್ಚಕ ಡಾ.ರಾಘವೇಂದ್ರ ರಾವ್ ನೇತ್ವತ್ವದಲ್ಲಿ ನಡೆಯಿತು.