

ವಿಜಯವಾಣಿ ಸುದ್ದಿಜಾಲ ಉಡುಪಿ
ಬ್ರಿಟಿಷರ ವಿರುದ್ಧ ನೂರಾರು ವರ್ಷಗಳ ಕಾಲ ಹೋರಾಡಿ ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ಭಾರತವೇನೋ ಸ್ವತಂತ್ರ ರಾಷ್ಟ್ರವಾಯಿತು. ಆದರೆ, ಇಂಗ್ಲಂಡ್ನ ಬ್ಯಾರಿಷ್ಟರ್ ವಕೀಲನ ಮೂಲಕ ಕೇವಲ 5 ವಾರದಲ್ಲಿ ಭಾರತದಲಿದ್ದ ಬ್ರಿಟಿಷ್ ವೈಸರಾಯ್ ನ ಕಚೇರಿಯಲ್ಲಿ ದೇಶ ಎರಡು ಹೋಳಾಗಿ ವಿಭಜನೆಗೊಂಡಿರುವುದು ಭಾರತದ ನೆಲದ ದುರಂತ ಕಥೆಯಾಗಿದೆ ಎಂದು ಕಾರ್ಕಳದ ಖ್ಯಾತ ವಕೀಲ ಸುವ್ಹೃತಕುಮಾರ್ ತಿಳಿಸಿದರು.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಗಸ್ಟ್ 14ರಂದು ಸಂಜೆ ಆಯೋಜಿಸಿದ್ದ ವಿಭಜನೆ ವಿಭೀಷಣ ಸ್ಕೃತಿ ದಿವಸ ಕಾರ್ಯಕ್ರಮದಲ್ಲಿ ದೇಶ ವಿಭಜನೆಯ ಕರಾಳ ಇತಿಹಾಸ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ದೇಶದ ಶೈಕ್ಷಣಿಕ ಪಠ್ಯದಲ್ಲಿ ಈ ವಿಚಾರ ಉಲ್ಲೇಖವೇ ಇಲ್ಲ ಎಂದರು.
ಕುತ್ಯಾರು ನವೀನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
ಪ್ರಕೋಷ್ಠಗಳ ಜಿಲ್ಲಾ ಸಹ ಸಂಚಾಲಕ ಶಂಕರ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು. ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ದಿಲೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಗರ ಪ್ರಕೋಷ್ಠ ಅಧ್ಯಕ್ಷ ಮಧುಕರ ಮುದ್ರಾಡಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಭಜನೆ ವಿಭೀಷಣ ಸ್ಕೃತಿ ದಿವಸ ನಿಮಿತ್ತ ಜಿಲ್ಲಾ ಬಿಜೆಪಿ ವತಿಯಿಂದ ಕಡಿಯಾಳಿಯ ಹೋಟೆಲ್ ಓಷಿಯನ್ ಪರ್ಲ್ ಬಳಿಯಿಂದ ಜಿಲ್ಲಾ ಬಿಜೆಪಿ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷೆ ಸುಮಾ ಯು. ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಿ. ಶೆಟ್ಟಿ, ಸರೋಜಾ ಶೆಣೈ, ಪ್ರಮುಖರಾದ ಗೀತಾಂಜಲಿ ಎಂ. ಸುವರ್ಣ, ವೀಣಾ ಎಸ್. ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಗಿರಿಧರ ಆಚಾರ್ಯ, ನಗರಸಭಾ ಸದಸ್ಯರು, ಮಹಿಳಾ ಮೋರ್ಚಾ ಜಿಲ್ಲಾ, ಉಡುಪಿ ನಗರ, ಗ್ರಾಮಾಂತರ ಮತ್ತು ಕಾಪು ಮಂಡಲದ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವ ಹಾಗೂ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು. ನಿಟ್ಟೂರು-ಅಂಬಾಗಿಲು ಜಂಕ್ಷನ್ (ಅಂಬಾಗಿಲು-ಮಣಿಪಾಲ ರಸ್ತೆ ತಿರುವು) ಬಳಿ ಇರುವ ದಿ. ಕರಂಬಳ್ಳಿ ಸಂಜೀವ ಶೆಟ್ಟಿ ಅವರ ಪ್ರತಿಮೆಗೆ ಮಾಲೆ ಅರ್ಪಿಸುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಅವರು ಜಾಥಾಕ್ಕೆ ಚಾಲನೆ ನೀಡಿದರು. ರ್ಯಾಲಿಯು ಕಲ್ಸಂಕ-ಕಡಿಯಾಳಿ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪ ರಸ್ತೆ ಮಾರ್ಗವಾಗಿ ಬಂದು ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಸಮಾಪ್ತಿಗೊಂಡಿತು.