

ಮಂಗಳೂರು : ಇಂಟಾಕ್ ಮಂಗಳೂರು ಘಟಕ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವ ಸಂಗೀತ ದಿನದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಛೇರಿ ಜೂ.21ರಂದು ಸಾಯಂಕಾಲ 5.30ಕ್ಕೆ ನಗರದ ಕೊಡಿಯಾಲ್‌ಗುತ್ತು ಕಲಾಕೇಂದ್ರದಲ್ಲಿ ನಡೆಯಲಿದೆ. ತಬಲಾದಲ್ಲಿ ರಾಜೇಶ್ ಭಾಗವತ್ ಹಾಗೂ ಹಾರ್ಮೋನಿಯಂನಲ್ಲಿ ಮೇಧಾ ಭಟ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.