

ಮಂಗಳೂರು : ಚೆನ್ನೈ ನಗರದ ಸಂಯುಕ್ತ ಗೌಡ ಸಾರಸ್ವತ ಸಭಾ ವತಿಯಿಂದ ಜೆ. ಎಸ್.ಪ್ರಭು -ರಮಾಬಾಯಿ ಪ್ರಭು ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಜು.14ರಂದು ಸಾಯಂಕಾಲ 6ಕ್ಕೆ ಚೆನ್ನೈ ಟಿ ನಗರದ ಮ್ಯೂಸಿಕ್ ಹಾಲ್ ನಲ್ಲಿ ನಡೆಯಲಿದೆ.ಮಂಗಳೂರಿನ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್ ನಾಯಕ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಶಿರಸಿಯ ಭರತ್ ಹೆಗ್ಡೆ ಹಾರ್ಮೋನಿಯಂ ಹಾಗೂ ಮೂಡಬಿದಿರೆಯ ವ್ನಿೇಶ್ ಪ್ರಭು ತಬಲದಲ್ಲಿ ಸಾಥ್ ನೀಡಲಿದ್ದಾರೆ.ಸಂಯುಕ್ತ ಗೌಡ ಸಾರಸ್ವತ ಸಭಾ ಅಧ್ಯಕ್ಷ ಡಾ. ಎಸ್. ದಿನೇಶ್ ನಾಯಕ್ ಅವರು ಸಂಗೀತ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.