ಸರ್ವರನ್ನು ಗೌರವಿಸುವ ವಿಎಚ್‌ಪಿ ಕಾರ್ಯ ಶ್ಲಾಘನೀಯ

8manju6
ಬೆಳಗಾವಿ ನಗರದ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ಸಮರಸತಾಭವನದಲ್ಲಿ ಶನಿವಾರ ಭಕ್ತರು, ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮ ಜರುಗಿತು. ಕಾಡಸಿದ್ದೇಶ್ವರ ಸ್ವಾಮೀಜಿ, ಸವಿತಾ ಕಾಂಬಳೆ, ಆನಂದ ಚೌಹಾಣ, ಕೃಷ್ಣ ಭಟ್, ಮುನಿಸ್ವಾಮಿ ಭಂಡಾರಿ ಇತರರಿದ್ದರು.
Published on

ಬೆಳಗಾವಿ: ನಿಜವಾದ ದೇವರು ಪೌರಕಾರ್ಮಿಕರು ಎಂಬುವುದನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಗುರುತಿಸಿದ್ದಾರೆ. ಈಗ ವಿಶ್ವ ಹಿಂದೂ

ಪರಿಷತ್‌ನವರು ಈ ಕಾರ್ಯ ಮುಂದುವರಿಸಿದ್ದಾರೆ. ಜಾತಿಮತ ಎನ್ನದೇ ಎಲ್ಲರನ್ನು ಗೌರವಿಸಿ ಹಿಂದೂ ಸಮಾಜದ ಎಲ್ಲ ಕಟ್ಟಕಡೆಯ ವ್ಯಕ್ತಿಯನ್ನು ಪೂಜ್ಯನೀಯ ಭಾವದಿಂದ ನೋಡುವ ವಿಎಚ್‌ಪಿ ಕಾರ್ಯ ಮುಂದುವರೆಯಲಿ ಎಂದು ಶಿವಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ಸಮರಸತಾ ಭವನದಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ ಮತ್ತು ಪಾಲಿಕೆ ಸದಸ್ಯರ ಸಹಯೋಗದಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿ ಬಂದ ಭಕ್ತರು, ಪೌರಕಾರ್ಮಿಕರನ್ನು ಸನ್ಮಾನ, ತ್ರಿವೇಣಿ ಸಂಗಮದ ಗಂಗಾಜಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಕೃಷ್ಣ ಭಟ್ ಮಾತನಾಡಿ, ನಾವು ದೇವಾಲಯದಲ್ಲಿ ಪರಮಾತ್ಮನ ಹುಡುಕಾಟ ಮಾಡುತ್ತೇವೆ. ಆದರೆ, ನಾವು ಏಳುವ ಮೊದಲೇ ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಕಾಯಕಯೋಗಿ ಪೌರಕಾರ್ಮಿಕರೇ ನಿಜವಾದ ದೇವರು ಎಂದರು.

ಚಿನ್ಮಯ ಮಿಷನ್ ನ ಶ್ರದ್ಧಾ ದೀದಿ ಮಾತನಾಡಿದರು. ಪೌರ ಕಾರ್ಮಿಕ ಸಂಘಟನೆಯ ಅಧ್ಯಕ್ಷಮುನಿಸ್ವಾಮಿ ಭಂಡಾರಿ ಮಾತನಾಡಿ, ಪೌರ ಕಾರ್ಮಿಕರಿಗೆ ಮೊಟ್ಟ ಮೊದಲ ಬಾರಿ ಗುರುತಿಸಿ ದೇವರ ಸ್ಥಾನ ಕೊಟ್ಟು, ಗೌರವಿಸಿದ್ದೀರಿ. ಸದಾ ಕೀಳರಿಮೆ ದೂರ ಸರಿಸಿ ನಮ್ಮನ್ನು ಅಪ್ಪಿಕೊಂಡಿದ್ದೀರಿ. ಈ ಸಂತಸದ ಕ್ಷಣದಲ್ಲಿ ಮಾತು ಬರದಂತಾಗಿದೆ ಎಂದು ಹೇಳಿದರು.

ಪಾಲಿಕೆ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚೌಹಾಣ, ಶ್ರೀಕಾಂತ ಕದಂ, ಗಿರೀಶ ಧೋಂಗಡಿ, ಪ್ರಮೋದಕುಮಾರ ವಕ್ಕುಂದಮಠ, ಆನಂದ ಕರಲಿಂಗಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net