ಹಿಂದುಳಿದ ವರ್ಗಕ್ಕೆ ಮುಸ್ಲಿಮರ ಸೇರ್ಪಡೆ ಹಿಂದುಗಳಿಗೆ ಎಚ್ಚರಿಕೆಯ ಕರೆಗಂಟೆ- ಶರಣ್ ಪಂಪುವೆಲ್

Sharan-Pumpwell
Published on



ಮಂಗಳೂರು : ಲೋಕಸಭಾ ಚುನಾವಣೆಯ ಸಂದರ್ಭ ಕರ್ನಾಟಕ ಸರ್ಕಾರ ಮೀಸಲು ನೀಡುವ ಸಲುವಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿರುವುದು ಬಹಳ ಆತಂಕಕಾರಿಯಾಗಿದೆ. ಮುಸ್ಲಿಮರ ವೋಟಿಗೋಸ್ಕರ ಹಿಂದುಳಿದ ವರ್ಗಕ್ಕೆ ಅವರನ್ನು ಸೇರಿಸಿ ಬಹುಸಂಖ್ಯಾತರಾದ ಹಿಂದೂಗಳ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ , ಸರ್ಕಾರಿ ಕೆಲಸ ನೇಮಕಾತಿಯಲ್ಲಿ , ಪೊಲೀಸ್ ಇಲಾಖೆ, ಇತರ ಸರ್ಕಾರಿ ಸ್ವಾಮ್ಯಗಳ ಉದ್ಯೋಗ ನೇಮಕಾತಿಯಲ್ಲಿ ಮುಸ್ಲಿಮರಿಗೆ ಮುಕ್ತ ಅವಕಾಶ ಕೊಟ್ಟಂತಾಗುತ್ತದೆ. ಇದರಿಂದ ಹಿಂದುಳಿದ ವರ್ಗದ ಹಿಂದುಗಳಿಗೆ ಘೋರ ಅನ್ಯಾಯವಾಗಲಿದೆ. ದೇಶದ ಸಂಪತ್ತು ಮುಸ್ಲಿಮರಿಗೂ ಪಾಲು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡುವುದು ಹಿಂದುಗಳಿಗೆ ಬಗೆದ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ದೇಶದ ಎಲ್ಲ ವರ್ಗದವರ ಸಂಪತ್ತನ್ನು ಸರ್ವೇ ಮಾಡಿ ಹಂಚಲಾಗುವುದು ಎಂದು ಕಾಂಗ್ರೆಸ್ ನಾಯಕನ ಹೇಳಿಕೆ ಬಹಳ ಗಂಭೀರವಾಗಿದೆ. ಶೇ.80ಇರುವ ಹಿಂದುಗಳ ಆಸ್ತಿ ಪಾಸ್ತಿ , ಸಂಪತ್ತು ಬಲವಂತವಾಗಿ ಕಸಿದುಕೊಂಡು ಮುಸ್ಲಿಮರಿಗೆ ನೀಡುವ ಉದ್ದೇಶವಾಗಿದ್ದು , ಹಿಂದೂಗಳು ಎಚ್ಚೆತ್ತುಗೊಳ್ಳಬೇಕಾಗಿದೆ . ಹಿಂದುಗಳನ್ನು 2 ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶವಾಗಿದ್ದು .ಕಾಂಗ್ರೆಸ್‌ನ ಈ ವೋಟ್ ಬ್ಯಾಂಕ್ ರಾಜಕೀಯವನ್ನು ಹಿಂದುಗಳು ತಿರಸ್ಕರಿಸಬೇಕಾಗಿದೆ ಎಂದು ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಕಾಂಗ್ರೆಸ್‌ನ ಈ ಹಿಂದು ವಿರೋಧಿ , ಮುಸ್ಲಿಮರ ತುಷ್ಟೀಕರಣ ರಾಜಕಾರಣವನ್ನು ಧಿಕ್ಕರಿಸಿ ಹಿಂದುಗಳ ಹಿತ ಬಯಸುವ , ದೇಶದ ಭದ್ರತೆ , ಅಭಿವೃದ್ಧಿ ಗೋಸ್ಕರ ಕೆಲಸ ಮಾಡುವ ಸರ್ಕಾರ ಬರಬೇಕಾಗಿದೆ .
ಚುನಾವಣೆಯಂದು ಹಿಂದುಗಳು ಶೇ.ನೂರು ಮತದಾನ ಮಾಡಬೇಕಾಗಿದೆ . ಹಿಂದುಗಳು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಿ ತಪ್ಪದೆ ಕಡ್ಡಾಯವಾಗಿ ಮತ ಚಲಾಯಿಸಬೇಕು .
-ಶರಣ್ ಪಂಪುವೆಲ್, ಪ್ರಾಂತ ಸಹಕಾರ್ಯದರ್ಶಿ, ವಿಹಿಂಪ
...............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net