ಹಿಂದುಗಳು ಒಂದಾಗಿದ್ದರೆ ಸಮಾಜ ಶಕ್ತಿಶಾಲಿ, ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ನವನಗರದಲ್ಲಿ ವಿಎಚ್ ಪಿ ಸ್ಥಾಪನಾ ದಿನಾಚರಣೆ

IMG-20240831-WA0037.jpg
Published on

ಹುಬ್ಬಳ್ಳಿ: ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನ ಹಾಗೂ ಷ್ಯಷ್ಟಬ್ದಿ ಸಮಾರಂಭ ನವನಗರ ವಿಎಚ್ ಪಿ ಪ್ರಖಂಡದ ವತಿಯಿಂದ ಶ್ರೀರಾಮಮಂದಿರ ಸಭಾಭವನದಲ್ಲಿ ಶನಿವಾರ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಹಳೇಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದುಗಳು ಒಂದಾಗಿರಬೇಕು. ಆಗ ಸಮಾಜ ಶಕ್ತಿಶಾಲಿಯಾಗಲು ಸಾಧ್ಯ. ಜಾತಿ ಭೇದ ಮರೆತು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಸುಭಾಸಸಿಂಗ್ ಜಮಾದಾರ, ವಿಶ್ವ ಹಿಂದು ಪರಿಷತ್ತಿನ 60 ವರ್ಷಗಳ ಸಾಧನೆಯನ್ನು ವಿವರಿಸಿದರು. ನಾವೆಲ್ಲರೂ ಹನುಮಂತನ ರೀತಿ ಜಾಗ್ರತರಾಗಿರಬೇಕು, ಕುಂಭಕರ್ಣ ನಿದ್ರೆಯಿಂದ ಏಳಬೇಕು. ವಿಚ್ಚಿದ್ರಕಾರಿ ಶಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ರಘು ಯಲ್ಲಕ್ಕನವರ, ಪವನ ಮುದುಗಲ್ಲ, ರಾಜು ಪಾಚಂಗಿ ಮುಂತಾದವರು ಉಪಸ್ಥಿತರಿದ್ದರು.

ಹನುಮಂತ ಕೊರವರ ಅಧ್ಯಕ್ಷತೆ ವಹಿಸಿದ್ದರು. ಸಚಿನ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಸಂಜೀವ ಮಾಳವದಕರ ವೈಯಕ್ತಿಕ ಗೀತೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net