

ಬೆಳಗಾವಿ : ಹಿಂದೂಗಳ ಆಸ್ಥೆಯ ಶ್ರದ್ಧಾಕೇಂದ್ರವಾಗಿದ್ದ ಪಾಂಡವರ ಕಾಲದ ನಲ್ಲಡ ಶಿವಮಂದಿರ ಧಾರ್ಮಿಕ ಯಾತ್ರೆಯ ಮೇಲೆ ಇಸ್ಲಾಮಿಕ ಜಿಹಾದಿಗಳಿಂದ ಕಲ್ಲು ತೂರಾಟ ನಡೆಸಿರುವದನ್ನು ಖಂಡಿಸಿ ಹಾಗೂ ಕಿಡಿಗೇಡಿಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಪದಾಧಿಕಾರಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದರು.
ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿವರ್ಷ ಭಜರಂಗದಳದ ವತಿಯಿಂದ ಹರಿಯಾಣಾದ ಮೆವಾತನ ಯಾನುಹ ನಲ್ಲಿ ಧಾರ್ಮಿಕ ಬ್ರಜಮಂಡಲ ಯಾತ್ರೆಯನ್ನು ಆಚರಿಸಲಾಗುತ್ತದೆ. ಹಿಂದೂಗಳ ಆಸ್ಥೇಯ ಶ್ರದ್ದಾಕೇಂದ್ರವಾಗಿದ್ದ ಪಾಂಡವರ ಕಾಲದ ನಲ್ಲಡ ಶಿವಮಂದಿರ ಧಾರ್ಮಿಕ ಯಾತ್ರೆಯ ಮೇಲೆ ಇಸ್ಲಾಮಿಕ ಜಿಹಾದಿಗಳಿಂದ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ, ಹಿಂಸೆ ಮತ್ತು ಬೆಂಕಿ ಹಚ್ಚುವ ಕಾರ್ಯ ನಡೆದಿದೆ. ಅಲ್ಲದೆ ಸುತ್ತಲಿನ ಪರ್ವತದಿಂದ ಗುಂಡಿನ ಸುರಿಮಳೆ ಆಗಿದ್ದು, ಇದರಿಂದ ಅನೇಕ ಅಭಾಲವೃದ್ದ ಸ್ತ್ರೀ, ಪುರುಷರು ಗಾಯಗೊಂಡಿದ್ದಾರೆ. ನೂರಾರು ವಾಹನಗಳು ಬೆಂಕಿಗೆ ಆಹುತಿ ಆಗಿದ್ದು, ಇಬ್ಬರು ಗ್ರಹರಕ್ಷಕರು ವೀರಮರಣ ಹೊಂದಿರುತ್ತಾರೆ. ಭಜರಂಗದಳದ ಕಾರ್ಯಕರ್ತರು ಮತ್ತು ಅನೇಕ ತೀರ್ಥ ಯಾತ್ರಿಕರು ಗಾಯಗೊಂಡಿದ್ದಾರೆ. ನಿರಂತರವಾಗಿ ಹಿಂದೂ ಸಮಾಜದ ಮೇಲೆ ದಾಳಿ ಅಟ್ಟಹಾಸ ಮಾಡುತ್ತಿರುವ ಇಸ್ಲಾಮಿಕ ಜಿಹಾದಿ ಆತಂಕವಾದದ ವಿರುದ್ಧ ವ್ಯಾಪಕವಾಗಿ ಉಗ್ರವಾದ ಕಠಿಣ ಕ್ರಮ ತೆಗೆದುಕೊಳ್ಳಲು ಮತ್ತು ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಭಜರಂಗದಳದ ವತಿಯಿಂದ ಹರಿಯಾಣಾದ ವೆವಾತನಲ್ಲಿ ಯಾನುಹನಲ್ಲಿ ಧಾರ್ಮಿಕ ಬ್ರಜಮಂಡಲ ಯಾತ್ರೆಯನ್ನು ಆಚರಿಸಲಾಗುತ್ತದೆ. ಹಿಂದೂಗಳ ಆಸ್ತೇಯ ಶ್ರದ್ದಾಕೇಂದ್ರವಾಗಿದ್ದ ಪಾಂಡವರ ಕಾಲದ ನಲ್ಲಡ ಶಿವಮಂದಿರ ಧಾರ್ಮಿಕ ಯಾತ್ರೆಯ ಮೇಲೆ ಇಸ್ಲಾಮಿಕ ಜಿಹಾದಿಗಳಿಂದ ಕಲ್ಲು ತೂರಾಟ ಹಿಂಸೆಯಾಗುತ್ತಿದೆ. ಸರ್ಕಾರ ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಇಸ್ಲಾಮಿಕ ಉಗ್ರರನ್ನು ಬುಡ ಸಮೇತ ಕಿತ್ತಾಹಾಕಬೇಕು, ನರೇಂದ್ರ ಮೋದಿ ಅವರು ಜಗತ್ತಿನಲ್ಲಿ ಆತಂಕವಾದವನ್ನು ದೂರು ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಕ್ರಮಜರಗಿಸಬೇಕೆಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವೀಣಾ ಗಸ್ತಿ, ಆನಂದ ಕರಲಿಂಗಣ್ಣವರ, ಉಮೇಶ ಚಿಂಡಕ, ಗಣೇಶ ಚೌಗುಲೆ, ಸಂತೋಷ ಮಾದಿಗರ, ಸುನಿಲ್ ಗೌರಣ್ಣ, ಆದಿನಾಥ ಗಾವಡೆ, ಗೋವಿಂದರಾವ್ ಕಿರ್ಮಿಟ್ಟೆ, ನಾಗಪ್ಪ ತುಬಾಕಿ ಸೇರಿದಂತೆ ಇತರರಿದ್ದರು