ವಿಹಿಂಪ, ಬಜರಂಗದಳದಿಂದ ರಸ್ತೆ ರೋಖೋ, ಪಹಣಿಯಲ್ಲಿ ವಕ್ಪ್ ಹೆಸರು ಸೇರ್ಪಡೆ ವಿರೋಧಿಸಿ ಬೃಹತ್ ಪ್ರತಿಭಟನೆ

13 GJD 3= VHP protest
Published on

ಗಜೇಂದ್ರಗಡ: ರೈತರ ಜಮೀನು, ಮಂದಿರ ಹಾಗೂ ಹಿಂದು ರುದ್ರಭೂಮಿಯನ್ನು ಆಕ್ರಮಿಸಿರುವ ವಕ್ಪ್ ಕ್ರಮ ವಿರೋಧಿಸಿ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದಿಂದ ಬುಧವಾರ ರಸ್ತೆ ರೋಖೋ ನಡೆಸಲಾಯಿತು.

ಪಟ್ಟಣದ ಗದಗ ರಸ್ತೆ, ರೋಣ ರಸ್ತೆ, ಕುಷ್ಟಗಿ ರಸ್ತೆಗಳಲ್ಲಿ ತಲಾ ಅರ್ಧ ಗಂಟೆ ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಪ್ರಯಾಣಿಕರಿಗೆ ತೊಂದರೆಯಾಯಿತು. ಗದಗ ರಸ್ತೆಯಲ್ಲಿ ಟೈಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಕಾಲಕಾಲೇಶ್ವರ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ವಿುಸಿದರು. ಇದರಿಂದ ಸುಮಾರು 2 ಕಿ.ಮೀ ನಷ್ಟು ಟ್ರಾಪಿಕ್ ಜಾಮ್ ಉಂಟಾಗಿತ್ತು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷೆ ರಾಣಿ ಚನ್ನಾವರ ಮಾತನಾಡಿ, ರಾಜ್ಯ ಸರ್ಕಾರ ರೈತರ ಜಮೀನಿನ ಮೇಲೆ ಮಠ ಮಂದಿರ, ಹಿಂದುಗಳ ರುದ್ರಭೂಮಿ ಹಾಗೂ ಸರ್ಕಾರದ ಆಸ್ತಿಯ ಮೇಲೆ ವಕ್ಪ್ ಹೆಸರು ಸೇರಿಸಿರುವುದನ್ನು ಶೀಘ್ರವೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸಂಜೀವ ಜೋಶಿ, ಸಂತೋಷ ವಸ್ತ್ರದ, ಪರಶುರಾಮ ಭಾವಿಕಟ್ಟಿ, ಪ್ರಸಾದ ಬಡಿಗೇರ, ಬಾಬು ರಾಜೋಳಿ, ಮಂಜುನಾಥ ಬಡಿಗೇರ, ಅಶೋಕ ಜಕ್ಕಲಿ, ಕಿರಣ ಕಮ್ಮಾರ, ಅನುರಾಗ ಚಿನಿವಾಲರ, ರಾಹುಲ ಬೂದಿಹಾಳ, ಅಶೋಕ ಪವಾರ, ಮಂಜುನಾಥ ಚನ್ನಿ, ಕೇಶವ ರಾಯಬಾಗಿ, ಶೇಶು ರಾಯಬಾಗಿ, ರುದ್ರಮುನಿ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net