

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರಿಂದ ನಡೆದ ಲಾಠಿ ಪ್ರಹಾರ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಜಂಟಿಯಾಗಿ ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
ನರೇಂದ್ರ ಗ್ರಾಮದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಗಲಾಟೆ ಇರಲಿಲ್ಲ. ಡಿ.ಜೆ.ದಿಂದ ಗದ್ದಲ ನಡೆಯುತ್ತಿದ್ದರೆ ಡಿಜೆಯನ್ನು ಬಂದ್ ಮಾಡಿಸಿದ್ದರೆ ಮುಗಿಯುತ್ತಿತ್ತು. ಆದರೆ, ಹಿಂದು ಸಮುದಾಯದವರ ಮೇಲೆ ದಬ್ಬಾಳಿಕೆ ನಡೆಸುವ ಉದ್ದೇಶದಿಂದ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೊಲೀಸ್ ವರಿಷ್ಠಾಽಕಾರಿ ಕಚೇರಿ ಎದುರು ಕುಳಿತು ಪೊಲೀಸರ ವಿರುದ್ಧ ಽಕ್ಕಾರ ಕೂಗಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಪ್ರತಿಭಟನೆ ಕೈಬಿಡಿ ಎಂದು ಡಿವೈಎಸ್‌ಪಿ ಶಿವಾನಂದ ಕಟಗಿ ಮನವಿ ಮಾಡಿದರು. ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎಸ್. ಕಮತಗಿ ಹಾಗೂ ಬೀಟ್ ಪೊಲೀಸ್ ಕಾನ್‌ಸ್ಟೇಬಲ್ ಸೈಯದ್ ಅವರನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು. ಎರಡು ದಿನಗಳ ಗಡುವು ನೀಡಿ ಪ್ರತಿಭಟನೆ ಕೆಬಿಟ್ಟರು.
ಬಸವರಾಜ ಕುಂದಗೋಳಮಠ, ಶಂಕರ ಕೋಮಾರದೇಸಾಯಿ, ಜಯತೀರ್ಥ ಕಟ್ಟಿ, ಅನುದೀಪ ಕುಲಕರ್ಣಿ, ಸಿದ್ದು ಹಿರೇಮಠ, ನಿಂಗಪ್ಪ ಸುತಗಟ್ಟಿ, ನಾಗೇಶ ಹಟ್ಟಿಹೊಳಿ, ಈಶ್ವರ ಗಾಣಿಗೇರ, ಸುದತ್ತ ಮುತಾಲಿಕ ದೇಸಾಯಿ, ಮಹಾವೀರ ದೇಸಾಯಿ, ಯಲ್ಲಪ್ಪ ಅಕ್ಕಿ ಹಾಗೂ ಗ್ರಾಮದ ಹಿರಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.