

ತುಮಕೂರು: ನಗರಸಭೆ ಮಾಜಿ ಅಧ್ಯಕ್ಷ, ಟೂಡಾ ಮಾಜಿ ಅಧ್ಯಕ್ಷ ರೆಡ್ಡಿಚಿನ್ನಯಲ್ಲಪ್ಪ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕಂಬನಿ ಮಿಡಿದಿದ್ದಾರೆ. ನಗರ ಗಾರ್ಡನ್ ರಸ್ತೆಯ ಹಿಂದು ರುದ್ರಭೂಮಿಯಲ್ಲಿ ಮಂಗಳವಾರ ಸಂಜೆ ರೆಡ್ಡಿ ಚಿನ್ನಯೆಲ್ಲಪ್ಪ ಅಂತ್ಯ ಸಂಸ್ಕಾರ ನೆರವೇರಿತು.
ನಗರದ ಹನುಮಂತಪುರ ಬೈಪಾಸ್ ಬಳಿಯ ಮೃತರ ನಿವಾಸದಲ್ಲಿ ಮಂಗಳವಾರ ರೆಡ್ಡಿ ಚಿನ್ನಯಲ್ಲಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಚಿವ ಪರಮೇಶ್ವರ್ ಕುಟುಂಬಸ್ಥರನ್ನು ಸಂತೈಸುವ ವೇಳೆ ಉಮ್ಮಳಿಸಿ ಬಂದ ದು@ಖ ತಡೆಯಲಾರದೆ ಆತ್ಮೀಯ ಸ್ನೇಹಿತನನ್ನು ನೆನೆದು ಕಣ್ಣೀರಾದರು.
ಕೆಎನ್ನಾರ್ ಭೇಟಿ: ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರೆಡ್ಡಿ ಚಿನ್ನಯೆಲ್ಲಪ್ಪ ಒಡನಾಡಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಹ ಅಂತಿಮ ದರ್ಶನ ಪಡೆದರು.
ಗಣ್ಯರ ಭೇಟಿ: ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದರಾದ ಜಿ.ಎಸ್.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸೊಗಡುಶಿವಣ್ಣ, ಮಾಜಿ ಶಾಸಕ ಎಸ್.ಷಫೀ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹ್ಮದ್, ದಿನೇಶ್, ಟಿ.ಎಚ್.ವಾಸುದೇವ್, ಕರಾಟೆ ಕೃಷ್ಣಮೂರ್ತಿ ಸೇರಿದಂತೆ ಹಲವಾರು ಮುಖಂಡರು ಸ್ನೇಹಿತರು ಅಂತಿಮ ದರ್ಶನ ಪಡೆದರು.
ಅಂತಿಮ ಮೆರವಣಿಗೆ: ರೆಡ್ಡಿ ಚಿನ್ನಯೆಲ್ಲಪ್ಪ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ ಹನುಮಂತಪುರದಿಂದ ಬೆಳಗುಂಬ ರಸ್ತೆ, ಎನ್.ಆರ್.ಕಾಲನಿ, ಕೋತಿತೋಪು, ಶ್ರೀರಾಮನಗರ ಮೂಲಕ ಸಾಗಿ ಗಾರ್ಡನ್ ರಸ್ತೆಯ ಹಿಂದು ರುದ್ರಭೂಮಿವರೆಗೆ ನಡೆಯಿತು. ಸಂಜೆ 6ಕ್ಕೆ ಅಂತಿಮ ವಿಧಿವಿಧಾನಗಳೊಂದಿಗೆ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಸಹಸ್ರಾರು ಅಭಿಮಾನಿಗಳು ಈ ಸಂದರ್ಭದಲ್ಲಿದ್ದರು.
ಶ್ರದ್ಧಾಂಜಲಿ ಸಲ್ಲಿಕೆ: ಶ್ರೀರಾಮನಗರದ ಸ್ನೇಹಿತರ ಬಳಗದ ವತಿಯಿಂದ ಹೊರಪೇಟೆಯ ಚಿಕ್ಕ ಮಾರ್ಕೆಟ್ ಸರ್ಕಲ್ನಲ್ಲಿ ರೆಡ್ಡಿ ಚಿನ್ನಯೆಲ್ಲಪ್ಪ ೋಟೋ ಇಟ್ಟು ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.