ಯಗಚಿ ನಾಲೆ ಸಮೀಪ ಪಶು ವೈದ್ಯಕೀಯ ತ್ಯಾಜ್ಯ

7blrp3
ಪಶುಗಳಿಗೆ ನೀಡಿರುವ ಇಂಜೆಕ್ಷನ್, ಗ್ಲೂಕೋಸ್ ಇತರ ವಸ್ತುಗಳನ್ನು ಪಟ್ಟಣದ ಹೊಸ ನಗರದ ಯಗಚಿ ನಾಲೆ ದಡದಲ್ಲಿ ಬಿಸಾಕಿರುವುದನ್ನು ವೀಕ್ಷಿಸುತ್ತಿರುವ ಜನರು.
Published on

ಬೇಲೂರು: ಪಶುಗಳಿಗೆ ನೀಡಿರುವ ಅಪಾಯಕಾರಿ ಇಂಜೆಕ್ಷನ್ ಸಿರಿಂಜ್, ಗ್ಲೂಕೋಸ್ ಸೇರಿದಂತೆ ಇತರ ವಸ್ತುಗಳನ್ನು ಪಟ್ಟಣದ ಹೊಸ ನಗರದ ಯಗಚಿ ನಾಲೆ ಸಮೀಪ ಹಾಕಿದ್ದು, ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಸದಸ್ಯೆ ಮೀನಾಕ್ಷಿ ವೆಂಕಟೇಶ್ ಮತ್ತಿತರರು ಬುಧವಾರ ಪರಿಶೀಲಿಸಿದರು.

ಪುರಸಭೆ ಸದಸ್ಯೆ ಮೀನಾಕ್ಷಿ ವೆಂಕಟೇಶ್ ಮಾತನಾಡಿ, ಹೊಸ ನಗರದ ಯಗಚಿ ನಾಲೆ ದಡದಲ್ಲಿ ಅಪಾಯಕಾರಿ ಅನುಪಯುಕ್ತ ವಸ್ತುಗಳನ್ನು ತಂದು ಹಾಕುವುದು ಮಾಮೂಲಾಗಿದೆ. ಈಗ ಬಳಸಿರುವ ಅಪಾಯಕಾರಿ ಸಿರಿಂಜ್ ಸೇರಿದಂತೆ ಇನ್ನಿತರ ವಸ್ತುಗಳೊಂದಿಗೆ ಸ್ಥಳೀಯ ಅಮೃತ ವೆಟ್ ಫಾರ್ಮ್‌ವೊಂದರ ಚೀಟಿ ಸಿಕ್ಕಿದ್ದು, ಅವರೇ ತಂದು ಹಾಕಿರುವ ಶಂಕೆ ಇದೆ. ನಮ್ಮ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಹೊಸ ನಗರದಲ್ಲಿ ಸಿಕ್ಕಿರುವ ಸಿರಿಂಜ್‌ಗಳು ನಮ್ಮ ಇಲಾಖೆಯವರು ಬಳಸಿದವುಗಳಲ್ಲ. ನಾವು ಬಳಸಿದ ಸಿರಿಂಜ್‌ಗಳನ್ನು ಬಯೋ ಮೆಡಿಕಲ್ ವೇಸ್ಟೇಜ್‌ಗೆ ಕೊಡುತ್ತೇವೆ. ಅಮೃತ ವೆಟ್ ಫಾರ್ಮನವರು ಮೆಡಿಕಲ್ ನಡೆಸಲು ಮಾತ್ರ ಅನುಮತಿ ಪಡೆದು, ಚಿಕಿತ್ಸೆ ಸಹ ನೀಡುತ್ತಿದ್ದರು. ಆದ್ದರಿಂದ ಅವರಿಗೆ ಚಿಕಿತ್ಸೆ ನೀಡದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net