ಆರೋಗ್ಯ ಸಂರಕ್ಷಣೆಯಲ್ಲಿ ಪಶು ಸಖಿಯರ ಪಾತ್ರ ಮುಖ್ಯ

20HUKKERI2.jpeg
Published on

ಹುಕ್ಕೇರಿ: ಗ್ರಾಮೀಣ ಜಾನುವಾರುಗಳ ಆರೋಗ್ಯ ಸಂರಕ್ಷಣೆಯಲ್ಲಿ ಪಶು ಸಖಿಯರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಹುಕ್ಕೇರಿ ಪಟ್ಟಣದಲ್ಲಿ ಶಾಸಕ ನಿಖಿಲ್ ಕತ್ತಿ ಪಶು ಸಖಿಯರಿಗೆ ಪಶು ಚಿಕಿತ್ಸಾ ಕಿಟ್, ಸಮವಸ್ತ್ರ ವಿತರಿಸಿದರು. ಭೀಮಶಿ ಗೋರಖನಾಥ, ಚನ್ನಪ್ಪ ಗಜಬರ, ಆನಂದ ಲಕ್ಕುಂಡಿ, ಆದರ್ಶ ಅಂಕಲಗಿ ಇತರರಿದ್ದರು.
ಹುಕ್ಕೇರಿ ಪಟ್ಟಣದಲ್ಲಿ ಶಾಸಕ ನಿಖಿಲ್ ಕತ್ತಿ ಪಶು ಸಖಿಯರಿಗೆ ಪಶು ಚಿಕಿತ್ಸಾ ಕಿಟ್, ಸಮವಸ್ತ್ರ ವಿತರಿಸಿದರು. ಭೀಮಶಿ ಗೋರಖನಾಥ, ಚನ್ನಪ್ಪ ಗಜಬರ, ಆನಂದ ಲಕ್ಕುಂಡಿ, ಆದರ್ಶ ಅಂಕಲಗಿ ಇತರರಿದ್ದರು.

ಪಟ್ಟಣದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಶು ಸಖಿಯರಿಗೆ ಪಶು ಚಿಕಿತ್ಸಾ ಕಿಟ್ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಮನೆ ಬಾಗಿಲಿಗೆ ಪಶು ಸಖಿಯರ ಸೇವೆ ದೊರೆಯಲಿದೆ. ರೈತರು ಮತ್ತು ಪಶು ಇಲಾಖೆ ನಡುವಿನ ಸಂಪರ್ಕದ ಕೊಂಡಿಯಾಗಿ ಸಖಿಯರು ಸೇವೆ ಸಲ್ಲಿಸಲಿದ್ದಾರೆ ಎಂದರು.
 

ಸಹಾಯಕ ನಿರ್ದೇಶಕ ಡಾ.ಆರ್.ಎಂ.ಕದಂ ಮಾತನಾಡಿ, ತಾಲೂಕಿನಲ್ಲಿ ಇರುವ ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಇರದ ಪಶು ಇಲಾಖೆ ಸಿಬ್ಬಂದಿ ಕೊರತೆ ಕುರಿತು ಶಾಸಕರ ಗಮನ ಸೆಳೆದರು. ಪುರಸಭೆ ಸದಸ್ಯ ಭೀಮಶಿ ಗೋರಖನಾಥ, ಮುಖಂಡರಾದ ಚನ್ನಪ್ಪ ಗಜಬರ, ಆನಂದ ಲಕ್ಕುಂಡಿ, ಶಹಜಹಾನ ಬಡಗಾಂವಿ, ಆದರ್ಶ ಅಂಕಲಗಿ, ಸಿದ್ದು ಗಡಕರಿ, ಗಿರೀಶ ಕುಲಕರ್ಣಿ, ನೀಲಪ್ಪ ಕೋಲೆ, ಶಿವರಾಜ ನಾಯಿಕ, ಮುನ್ನಾ ಕಳಾವಂತ, ಸುರೇಶ ಬೇವಿನಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net